Site icon BosstvKannada

2 ಲಕ್ಷ ರೂ. ಸನಿಹಕ್ಕೆ ಚಿನ್ನ! ಇಂದು ದರ ಹೇಗಿದೆ?

ಬೆಂಗಳೂರು: ಬಂಗಾರ ಪ್ರಿಯರಿಗೆ ಕಳೆದ ಕೆಲವು ದಿನಗಳಿಂದಲೂ ಸಂಕಷ್ಟ ಎದುರಾಗುತ್ತಿದೆ. ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಹಾರಿ ನಿಂತಿದ್ದು, ಯಾವಾಗ ಇಳಿಯುತ್ತದೆ ಎಂದು ಕಾಯ್ದು ನೋಡುತ್ತಿದ್ದಾರೆ. ಭಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಗರಿಷ್ಠ 1.30 ಲಕ್ಷ ರೂ.ಗೆ ಬಂದು ನಿಂತಿದೆ. ಇದನ್ನು ಗಮನಿಸಿದರೆ ಸದ್ಯದಲ್ಲೇ 2 ಲಕ್ಷ ರೂ. ಗಡಿಗೆ ಬಂದು ತಲುಪಲಿದೆ ಎನ್ನಲಾಗುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 870 ರೂ. ಏರಿಕೆ ಕಂಡಿದೆ.

ಬುಧವಾರ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 13,031 ರೂ. ಆಗಿದೆ. ಇಂದು 24 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ 87 ರೂ. ಹೆಚ್ಚಳವಾಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,310 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 870 ರೂ. ಏರಿಕೆಯಾಗಿದೆ.

22 ಕ್ಯಾರೆಟ್ ನ 1 ಗ್ರಾಂ ಬೆಲೆ 11,945 ರೂ. ಇದ್ದು, 80 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,19,450 ರೂ. ಆಗಿದೆ. ಇಂದು 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಂದು ಏರಿಕೆ ಕಂಡಿದೆ. ಗ್ರಾಂಗೆ 9 ರೂ. ಹೆಚ್ಚಳವಾಗಿದ್ದು, ಕೆಜಿ ಬೆಳ್ಳಿಗೆ 1,99,000 ರೂ. ದರ ಇದೆ.

ಸೂಚನೆ: ನಾವು ನೀಡಿರು ದರವೇ ಖಚಿತ ಎನ್ನಲಾಗುವುದಿಲ್ಲ. ಪ್ರಮುಖ ಜ್ಯುವೇಲರಿ ಶಾಪ್ ಗಳಿಂದ ಪಡೆದ ಮಾಹಿತಿ ಇದಾಗಿರುತ್ತದೆ. ಜ್ಯುವೇಲರಿ ಶಾಪ್ ನಲ್ಲಿ ಜಿಎಸ್ ಟಿ ಸೇರಿದಂತೆ ವಿವಿಧ ದರಗಳನ್ನು ಕೂಡ ವಿಧಿಸುತ್ತಾರೆ. ಹೀಗಾಗಿ ನಾವು ಕೊಟ್ಟಿರುವ ದರವೇ ಅಂತಿಮವಲ್ಲ.

Exit mobile version