BosstvKannada

Gig Workers : ಪೇಪರ್‌ ಡೆಲಿವರಿ ಬಾಯ್ಸ್‌ಗೆ ಸರ್ಕಾರದಿಂದ ಬಂಪರ್..!

ದಿನ ಬೆಳಗಾಗುವಷ್ಟರಲ್ಲೇ ಇಡೀ ರಾಜ್ಯ ಹಾಗೂ ದೇಶದ ಸುದ್ದಿ ಸಮಾಚಾರ ನಿಮ್ಮ ಮನೆ ಬಾಗಿಲಲ್ಲಿ ಇರುತ್ತೆ.. ಪ್ರತಿ ತಾಲೂಕು, ಪ್ರತಿ ಜಿಲ್ಲೆಯಿಂದ ಹಿಡಿದು ದೇಶಾದ್ಯಂತ ಏನೆಲ್ಲಾ ನಡೀತಾ ಇದೆ ಅನ್ನೋದನ್ನು ಜಸ್ಟ್‌ ದಿನಪತ್ರಿಕೆ ಕಣ್ಣಾಡಿಸಿದರೆ ಗೊತ್ತಾಗಿಬಿಡುತ್ತೆ.. ಇದ್ರ ಹಿಂದೆ ಆಯಾ ಪತ್ರಿಕಾ ಸಂಸ್ಥೆಗಳ ಶ್ರಮ ಸಾಕಷ್ಟಿದೆ..

ಆದ್ರೆ, ಅದಕ್ಕಿಂತಲೂ ಹೆಚ್ಚು ಬದ್ಧತೆ, ಕರ್ತವ್ಯ ಪ್ರಜ್ಞೆ ಇರೋದು ಪತ್ರಿಕಾ ವಿತರಕ ಕಾರ್ಮಿಕರಿಗೆ (Gig Workers) ಮಧ್ಯರಾತ್ರಿಯೇ ಎದ್ದು ಆಯಾ ಊರಿಗೆ ಪತ್ರಿಕೆಗಳನ್ನು ತಲುಪಿಸೋದ್ರಲ್ಲಿ ಯಾವತ್ತೂ ಹಿಂದೆ ಬೀಳಲ್ಲ.. ಮಳೆ ಬಂದ್ರೂ ಚಳಿ ಇದ್ರೂ ಅಂಜದೇ, ಅಳುಕದೇ ಪತ್ರಿಕೆಗಳನ್ನು ತಲುಪಿಸುತ್ತಾರೆ.. ಇಷ್ಟೆಲ್ಲಾ ಕಷ್ಟಪಡುವ ಈ ಶ್ರಮಜೀವಿಗಳ ಜೀವನಕ್ಕೆ ಸಂಬಳ ಬಿಟ್ರೆ ಬೇರೆ ಯಾವ ಆಧಾರವೂ ಇರಲಿಲ್ಲ..

ಇದೀಗ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್‌ ಸರ್ಕಾರದ ಕಾರ್ಮಿಕ ಸಚಿವರಾಗಿರುವ ಸಂತೋಷ್‌ ಲಾಡ್‌ ಅವರು ಹೊಸ ಯೋಜನೆ ಜಾರಿಗೆ ತಂದಿದ್ದಾರೆ.. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪತ್ರಿಕಾ ವಿತರಕರ ಹಿತ ರಕ್ಷಣೆ, ಜೀವನೋಪಾಯಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ..

ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್‌ ಲಾಡ್‌ ಅವರು ಕೂಡ ಈ ಯೋಜನೆಗಳನ್ನು ಸ್ವಲ್ಪವೂ ತಡ ಮಾಡದೇ ಅನುಷ್ಠಾನಕ್ಕೆ ತರುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.. ಪತ್ರಿಕಾ ವಿತರಕ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಕಾರ್ಮಿಕರ ಅಪಘಾತ ಹಾಗೂ ಆರೋಗ್ಯ ಸಹಾಯ ನಿಧಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ..

ಪತ್ರಿಕಾ ವಿತರಕ ಕಾರ್ಮಿಕರ ಕಲ್ಯಾಣ

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಹಾಗೆಯೇ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಪತ್ರಿಕಾ ವಿತರಕ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿ ಕೊಳ್ಳಿ..‌

Exit mobile version