BosstvKannada

ಗಂಡಸಲ್ವಾ..?, ಕಚಡಾ..! ಮಿತಿಮೀರಿದ ಅಶ್ವಿನಿ, ರಜತ್‌ ಮಾತು ಏನಿದು

ವ್ಯಕ್ತಿತ್ವದ ಆಟವಾದ ಬಿಗ್‌ಬಾಸ್‌ ಈಗ ರಣರಂಗದ ಅಖಾಡವಾದಂತೆ ಕಾಣುತ್ತಿದೆ. ಸವಾಲಿಗೆ ಸವಾಲ್‌.. ಏಟಿಗೆ ಎದುರೇಟು.. ಬಿಗ್‌ಬಾಸ್‌ ಮನೆಯನ್ನು ವಿಲನ್‌ ತನ್ನ ಹಿಡಿತಕ್ಕೆ ತಗೊಂಡಿದ್ದೇ ತಡ.. ಮನೆಯ ವಾತಾವರಣವೇ ಚೇಂಜ್‌ ಆಗಿದೆ.. ಶಾಂತಿಯಾಗಿದ್ದ ಮನೆಯಲ್ಲಿ ಕ್ರೋಧ, ವ್ಯಂಗ್ಯ, ಜಗಳ ತಾಂಡವವಾಡ್ತಿದೆ.. ಸ್ಪರ್ಧಿಗಳಂತೂ ಒಬ್ರಾದ ಮೇಲೊಬ್ರು ಮಾತಿನ ಮತಾಪು ಸಿಡಿಸಿ ಯುದ್ಧಕಾಂಡ ನಿರ್ಮಿಸಿದ್ದಾರೆ.. ಅಷ್ಟಕ್ಕೂ ಬಿಗ್‌ಬಾಸ್‌ ಮನೆಯಲ್ಲಿ ಏನಾಯ್ತು..? ವಾರದ ಮಧ್ಯದಲ್ಲೇ ಸ್ಪರ್ಧಿಗಳು ಸಿಡಿಮಿಡಿಗೊಳ್ತಿರೋದು ಯಾಕೆ..?

ಬಿಗ್‌ಬಾಸ್‌ ಮನೆ ಅತಿಥಿಗಳು ಬಂದು ಹೊದ್ಮೇಲೆ ಕೊಂಚ ಶಾಂತವಾಗಿತ್ತು.. ಕಾಮಿಡಿ ಇರಿಟೇಟ್‌ ಆಗ್ತಿದೆ ಅಂದಿದ್ದಕ್ಕೆ ಗಿಲ್ಲಿ ಕೂಡ ಸ್ವಲ್ಪ ಸೈಲೆಂಟ್‌ ಆಗಿದ್ರು.. ಅತ್ತ ಅಶ್ವಿನಿ 2.O ಗೇಮ್‌ಪ್ಲ್ಯಾನ್‌.. ಖಿನ್ನತೆಯಲ್ಲಿ ಧ್ರುವಂತ್‌. ಗಿಲ್ಲಿಯ ಚಿಯರ್‌ ಡ್ಯಾನ್ಸರ್‌ ಅಗಿ ರಜತ್‌ ಹೀಗೆ ಉರಿದುರಿದು ಬೀಳಬೇಕಿದ್ದ ಘಟಾನುಘಟಿಗಳೇ ತಮ್ಮ ಆಟವನ್ನು ಮರೆತಿದ್ರು.. ಯಾವಾಗ ವೀಕೆಂಡ್‌ ಬಂತೋ ಕಿಚ್ಚ ಸುದೀಪ್‌ ಕೊಟ್ಟ ಎನರ್ಜಿ ಬೂಸ್ಟ್‌ನಿಂದಾಗಿ ದೊಡ್ಮನೆ ಮಂದಿಗೆ ಮತ್ತೆ ಶಕ್ತಿ ಬಂದಂತೆ ಕಾಣಿಸ್ತಿದೆ. ಬಿಗ್‌ಬಾಸ್‌ ಫಿನಾಲೆ ಸಮೀಪಿಸುತ್ತಿರುವ ಕಾರಣ ಎಲ್ಲರೂ ತಮ್ಮ ತಮ್ಮ ದಾಳಗಳನ್ನು ಗಟ್ಟಿಯಾಗಿ ಉರುಳಿಸುತ್ತಿದ್ದಾರೆ. ಇದಕ್ಕೆ ಬಹುಮುಖ್ಯವಾಗಿ ಸಾಕ್ಷಿಯಾಗಿದ್ದೇ ಈ ವಾರದ ನಾಮಿನೇಷನ್‌.

ಈಗಾಗಲೇ ರಜತ್‌ನ ಕಾವ್ಯ ನಾಮಿನೇಟ್‌ ಮಾಡಿದ್ದಾರೆ. ಬಳಿಕ ಧ್ರುವಂತ್‌ ಹಾಗೂ ರಜತ್‌ ನಡುವೆ ದೊಡ್ಡ ಯುದ್ಧವೇ ನಡೆದುಹೋಗಿದೆ. ಇಬ್ಬರು ಇನ್ನೇನು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗ್ತಾರೇನೋ ಅನ್ನೋ ಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ. ಆದ್ರೆ ನಂತರ ನಡೆದಿರುವ ಜಗಳ ಬೆಚ್ಚಿಬೀಳಿಸುವಂತಿದೆ. ಅಶ್ವಿನಿಯನ್ನು ನಾಮಿನೇಟ್‌ ಮಾಡಿದ ರಜತ್‌ ಆಕೆಯ ನಿಲುವುಗಳೇ ಸರಿಯಿಲ್ಲ, ಧ್ರುವಂತ್‌ ಕೆಟ್ಟ ಪದ ಬಳಸಿದಾಗ ಸೈಲೆಂಟ್‌ ಆಗಿರ್ತಾರೆ. ಅದೇ ರಘು ಸರ್‌ ಏನೋ ಹೇಳಿದ್ದಕ್ಕೆ ಕಿರಿಕಿರಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಮನೆಯಲ್ಲಿರುವ ಯೋಗ್ಯತೆ ಇಲ್ಲ ಅನ್ನೋ ರೀತಿಯಲ್ಲಿ ರಜತ್‌ ಅಶ್ವಿನಿ ಮೇಲೆ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಶ್ವಿನಿ ಏಯ್‌.. ನೀವು ಗಂಡಸಲ್ವಾ..? ಥೂ ಕಚಡಾ ಅಂತ ನಾಲಗೆ ಹರಿಬಿಟ್ಟಿದ್ದಾರೆ. ರಜತ್‌ ಕೂಡ ಕಚಡಾ ಅನ್ನೋ ಪದ ಬಳಸಿ ಮಿತಿಮೀರಿದ್ದಾರೆ. ಇವರಿಬ್ಬರ ವಾಕ್ಸಮರ ಮುಗಿಲು ಮುಟ್ಟಿದೆ. ಆದ್ರೆ ವಾರಾಂತ್ಯದ ಕಿಚ್ಚನ ಕಟಕಟೆಯಲ್ಲಿ ಯಾರಿಗೆ ನ್ಯಾಯ ಸಿಗುತ್ತೆ. ಯಾರಿಗೆ ಬಿಸಿ ಮುಟ್ಟುತ್ತೆ ಅನ್ನೋದು ಕಾದು ನೋಡಬೇಕಿದೆ.

Exit mobile version