BosstvKannada

ಭಾವಿ ಪತಿ ಚೀಟಿಂಗ್‌ : ಮಂಧಾನ ಮದುವೆ ಕ್ಯಾನ್ಸಲ್?‌

ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಹಠಾತ್ತನೆ ಮುಂದೂಡಿದ್ದರಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 23ರ ಭಾನುವಾರ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿತ್ತು. ಹೃದಯಾಘಾತದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಿತ್ತು. ನಂತರ ಸ್ಮೃತಿ ಅವರ ವಿವಾಹವನ್ನು ಮುಂದೂಡಿದ್ದರು. ಮದುವೆಯ ಸಂಭ್ರಮದಲ್ಲಿರಬೇಕಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಇದೀಗ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ತಂದೆ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ಬಳಿಕ ತಮ್ಮ ಮದುವೆಗೆ ಸಂಬಂಧಿಸಿದ ಆಚರಣೆಗಳ ಎಲ್ಲ ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ತೆಗೆದುಹಾಕಿದ್ದುು, ಇದೀಗ ವ್ಯಾಪಕ ಕುತೂಹಲ ಮನೆಮಾಡಿದೆ.

ಅಲ್ಲದೆ, ತಮ್ಮ ಭಾವಿ ಪತಿಯಾದ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಯಾಗಿದ್ದಾರೆ. ಇದೀಗ ಸ್ಮೃತಿ ಅವರು ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು, ಪಲಾಶ್ ಅವರು ಪ್ರಪೋಸ್ ಮಾಡಿದ್ದ ವಿಡಿಯೋವನ್ನು ಕೂಡ ಅಳಿಸಲಾಗಿದೆ. ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕಾ ಪಾಟೀಲ್ ಅವರಂತಹ ಆಪ್ತ ಸ್ನೇಹಿತರು ಮತ್ತು ತಂಡದ ಸದಸ್ಯರು ಸಹ ವಿಡಿಯೋಗಳನ್ನು ಅಳಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ, RCB ನಾಯಕಿ ಮತ್ತು ಟೀಂ ಇಂಡಿಯಾ ಆಟಗಾರ್ತಿ ಸ್ಮ್ರತಿ ಮಂಧಾನ ಅವರ ಕೈ ಹಿಡಿಯಬೇಕಿದ್ದ ಬಾಲಿವುಡ್‌ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮಾತ್ರ ಸ್ಮ್ರತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್ ಮಾಡಿದ್ದಾರೆ ಎನ್ನಲಾದ ಚಾಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿವೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಲಾಶ್ ಸ್ಮೃತಿ ಮಂಧಾನಗೆ ಮೋಸ ಮಾಡಿದ್ದಾರಾ? ಈ ಸಂಗತಿ ತಿಳಿದ ಮೇಲೆ ಮದುವೆ ಮನೆಯಲ್ಲಿ ರದ್ಧಾಂತವಾಗಿರಬಹುದಾ? ಅಲ್ಲದೆ ಸ್ಮೃತಿ ಮಂಧಾನ ಮದುವೆ ಮುಂದೂಡಿದ ಬೆನ್ನಲ್ಲೇ ತಮ್ಮ ಮದುವೆಯ ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳನ್ನು ಏಕಾಏಕಿ ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸ್ಕ್ರೀನ್ ಶಾಟ್‌ನಲ್ಲಿ, ಮೇರಿ ಡಿಕೋಸ್ಟಾ ಅವರನ್ನು ಪಲಾಶ್ ಈಜಾಡಲು ಬರುವಂತೆ ಮೆಸೇಜ್ ಮಾಡಿದ್ದಾರೆ. ಇಷ್ಟೇ ಅಲ್ಲ ಸ್ಪಾಗೆ ಜೊತೆಯಲ್ಲಿ ಹೋಗೋಣ ಎಂದು ಹೇಳಿರುವ ಪಲಾಶ್ ಬೆಳಿಗ್ಗೆ 5ಕ್ಕೆ ಮೇರಿ ಡಿಕೋಸ್ಟಾ ಅವರನ್ನು ವರ್ಸೋವಾ ಬೀಚ್‌ಗೆ ಕರೆದಿದ್ದಾನೆ. ಅಷ್ಟೇ ಅಲ್ಲದೆ ಮೇರಿ ಜೊತೆ ಫ್ಲರ್ಟ್ ಮಾಡುವ ರೀತಿ ಮೆಸೇಜ್ ಮಾಡಿದ್ದಾನೆ ಎಂಬ ಮೆಸೇಜ್‌ ಸ್ಕ್ರೀನ್‌ಶಾಟ್ ವೈರಲ್ ಆಗಿವೆ. ಇದರ ಬಗ್ಗೆ ಸ್ಮ್ರೃತಿ ಆಗಲಿ ಪಲಾಷ್‌ ಆಗಿಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Exit mobile version