Site icon BosstvKannada

ಮೊಡವೆಯಿಂದ ಕ್ಯಾನ್ಸರ್‌ವರೆಗೂ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಹಿತ್ತಲ ಗಿಡ ಮದ್ದಲ್ಲ ಅನ್ನೋದು ಹಲವಾರು ವಿಚಾರಗಳಲ್ಲಿ ನಿಜ. ಹಣ್ಣು, ತರಕಾರಿಗಳನ್ನ ನಾವು ರೆಗ್ಯುಲರ್‌ ಆಗಿ ಸಾಕಷ್ಟು ಪ್ರಮಾಣದಲ್ಲಿ ತಿಂತಾ ಇದ್ರೆ ಅನೇಕ ಆರೋಗ್ಯ ಸಮಸ್ಯೆಗಳು ಹತ್ರಕ್ಕೂ ಬರೋದಿಲ್ಲ. ಆದ್ರೂ ಕೂಡ ಸಮಸ್ಯೆ ಕಾಣಿಸಿಕೊಳ್ಳೋವರ್ಗೂ ಸುಮ್ನೆ ಇದ್ದು ಆಮೇಲೆ ಔಷಧಿಗಳ ಮೇಲೆ ದುಡ್‌ ಸುರೀತೀವಿ. ಸಾಕಷ್ಟು ವಿಡಿಯೋಗಳ ಮೂಲಕ ಹಣ್ಣು, ತರಕಾರಿಗಳನ್ನ ಯಾಕ್‌ ತಿನ್ಬೇಕು? ಏನೇನ್‌ ಪ್ರಯೋಜನಗಳಿವೆ ಅನ್ನೋದನ್ನ ಹೇಳಿದ್ದೀವಿ. ಇವತ್ತು ಒಂದು ಚಮತ್ಕಾರಿ ಹಣ್ಣಿನ ಬಗ್ಗೆ ಮಾತಾಡೋಣ.

ಈ ಹಣ್ಣು ಮೊಡವೆಯಿಂದ ಹಿಡಿದು ಕ್ಯಾನ್ಸರ್‌ವರೆಗೂ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಗುಣಗಳನ್ನ ಹೊಂದಿದೆ. ಹೆಚ್ಚು ಹುಳಿ ಅಂಶವಿರುವ ಈ ಅನಾನಸ್‌ ಹಣ್ಣಿನಲ್ಲಿ ವಿಟಮಿನ್‌ ಎ,ಬಿ,ಸಿ, ಮ್ಯಾಂಗನೀಸ್‌, ಪೊಟ್ಯಾಶಿಯಂ, ಸತು ಹಾಗು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜಾಂಶಗಳಿದೆ. ಇದರಲ್ಲಿರುವ ಸಮೃದ್ಧವಾದ ಆಂಟಿಆಕ್ಸಿಡೆಂಟ್‌ಗಳು ಒತ್ತಡವನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಫ್ಲೇವನಾಯ್ಡ್ಸ್‌ ಹಾಗು ಫೇನೋಲಿಕ್‌ ಆಸಿಡ್‌ಗಳು ಇದ್ದು ಇದರ ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘಕಾಲದ ಉತ್ತಮ ಪರಿಣಾಮ ಬೀರಲಿದೆ. ನಿಯಮಿತವಾಗಿ ಪೈನಾಪಲ್‌ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ.

ಇನ್ನು, ನೆಗಡಿ ಸಮಸ್ಯೆ ಕಾಣಿಸಿಕೊಂಡಾಗ್ಲೂ ಕೂಡ ಪೈನಾಪಲ್‌ ತಿನ್ಬಹುದು.  ಕಾರಣ ಈ ಹಣ್ಣಿನಲ್ಲಿ ಬ್ರೋಮಲೇನ್‌ ಎಂಬ ಅಂಶವಿದ್ದು, ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಇದೆ. ಪೈನಾಪಲ್‌ ಕ್ಯಾಲ್ಷಿಯಂನಿಂದ ಸಮೃದ್ಧವಾಗಿದ್ದು, ಮೂಳೆಗಳನ್ನ ಬಲಪಡಿಸುತ್ತೆ. ಇನ್ನು, ವಿಟಮಿನ್‌ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೇದು. ವಯಸ್ಸಾದ ನಂತ್ರ ಕಣ್ಣಿ ದೃಷ್ಟಿ ವೀಕ್‌ ಆಗೋದು, ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳೋದು ಈ ರೀತಿಯ ಸಮಸ್ಯೆಗಳು ಆಗ್ಬಾರ್ದು ಅಂದ್ರೆ ಈಗಿನಿಂದ್ಲೇ ಪೈನಾಪಲ್‌ ತಿನ್ನೋ ಅಭ್ಯಾಸ ರೂಢಿಸಿಕೊಳ್ಳಿ.

ಇನ್ನು, ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿನ ಬೇಡವಾದ ರಾಸಾಯನಿಕಗಳನ್ನು ಹೊರಹಾಕುತ್ತೆ. ಇದರಿಂದ ಕ್ಯಾನ್ಸರ್‌ ಸಂಭವ ತೀರಾ ಕಡಿಮೆ ಅಂತಾ ಹೇಳಲಾಗುತ್ತೆ. ಹಾಗೆ ತ್ವಚೆಯ ಆರೋಗ್ಯ ಕಾಪಾಡೋದಿಕ್ಕೆ ವಿಟಮಿನ್‌ ಸಿ ತುಂಬಾ ಮುಖ್ಯವಾಗಿದ್ದು, ಪೈನಾಪಲ್‌ಲ್ಲಿ ವಿಟಮಿನ್‌ ಸಿ ಇರೋದ್ರಿಂದ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತೆ. ಹಾಗೆ ಮೊಡವೆ ಸಮಸ್ಯೆ ಕೂಡ ಕಡಿಮೆಯಾಗುತ್ತೆ.

Exit mobile version