Site icon BosstvKannada

Kodagu rain tragedy: ಭಾರೀ ಮಳೆಗೆ ಕೊಡಗಿನಲ್ಲಿ ಮೊದಲ ಬಲಿ : ಗೌರಿ ಮೃತ ದುರ್ದೈವಿ

Kodagu rain tragedy

ಮುಂಗಾರು ಪ್ರವೇಶಕ್ಕೂ ಮುನ್ನವೇ ವರುಣಾರ್ಭಟನ ಆರ್ಭಟ ರಾಜ್ಯದಲ್ಲಿ ಮುಂದುವರೆದಿದೆ. ಸಾಕಷ್ಟು ಜಿಲ್ಲೆಗಳಲ್ಲಿ ನಿರಂತರ ಮಳೆ ಅವಾಂತರಗಳೇ ಸೃಷ್ಟಿಯಾಗಿವೆ. ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿ ಸಹಿತ ಭಾರಿ ಮಳೆ ಯಿಂದ ಮರ ಬಿದ್ದ ಪರಿಣಾಮ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಮಳೆಗೆ ಬಲಿಯಾದ ಮೊದಲ ಸಾವಿನ ಪ್ರಕರಣ ಇದಾಗಿದೆ(Kodagu rain tragedy)

ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಕಬ್ಬಚ್ಚಿರ ಉತ್ತಪ್ಪ, ಜ್ಯೋತಿ ಅವರ ಲೈನ್‌ಮನೆಯಲ್ಲಿ ನೆಲೆಸಿದ್ದ ಗೌರಿ (51) ಎಂಬುವವರು ಮೃತ ದುರ್ದೈವಿಯಾಗಿದ್ದಾರೆ. ಕಳೆದ 4 ವರ್ಷಗಳಿಂದ ಉತ್ತಪ್ಪ ಅವರ ತೋಟ ಹಾಗೂ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿನ ಲೈನ್‌ಮನೆಯಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಗೌರಿ ಎಂಬುವವರು ಪಾತ್ರೆ ತೊಳೆಯ ಲೆಂದು ಮನೆಯಿಂದ ಹೊರ ಬಂದ ಸಂದರ್ಭ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಹಲಸಿನ ಮರವೊಂದು ಧರೆಗುರುಳಿದೆ. ಈ ರಭಸಕ್ಕೆ ಮರದ ನಡುವೆ ಮಣ್ಣಿನೊಳಗೆ ಗೌರಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.

Also Read: Talakaveri ಭಾಗಮಂಡಲದಲ್ಲಿ ಭಾರೀ ಮಳೆ : ತ್ರಿವೇಣಿ ಸಂಗಮ ಭರ್ತಿ

ಇಡೀ ಮರ ಗೌರಿ ಮೇಲೆ ಬಿದ್ದಿದ್ದು, ಘಟನಾ ಸ್ಥಳಕ್ಕೆ ವಿರಾಜಪೇಟೆ ಪಂಚಾಯತ್ ಅಧಿಕಾರಿಗಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version