ಬೀದರ್: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಗರ ವಿರುದ್ಧ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಎಂಬುವರು ಶಾಸಕರ ವಿರುದ್ಧ ದೂರು ನೀಡಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಶರಣು ಸಲಗರ ಅವರು ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಅವರಿಂದ 99 ಲಕ್ಷ ರೂ. ಹಣವನ್ನು ಪಡೆದಿದ್ದರು. ಹಣ ಪಡೆದ ಸಮಯದಲ್ಲಿ ಶಾಸಕರು ಭದ್ರತೆಗಾಗಿ ಖಾಲಿ ಚೆಕ್ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕರು ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿಸದ ಕಾರಣ, ಉದ್ಯಮಿ ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದ್ದೆ. ಆದರೆ, ಅದು ಬೌನ್ಸ್ ಆಗಿದೆ. ಈಗ ಸಂಜೀವ್ ಕುಮಾರ್ ಸುಗುರೆ ಅವರು ಶಾಸಕ ಶರಣು ಸಲಗರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

