Site icon BosstvKannada

ಸಿಗರೇಟ್ ವಿಚಾರಕ್ಕೆ ಜಗಳ: ಯುವಕನಿಗೆ ಚಾಕು ಇರಿತ

ಚಿಕ್ಕಮಗಳೂರು: ಬಾರ್ ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ ಶುರುವಾಗಿದ್ದು, ಯುವಕನಿಗೆ ಚಾಕು ಇರಿದಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಹೊರವಲಯದ ಅಕ್ಷಯ್ ಬಾರ್ನಲ್ಲಿ ಈ ಘಟನೆ ನಡೆದಿದೆ. ಸಿಗರೇಟ್ ವಿಚಾರವಾಗಿ 2 ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದ್ದು, ವ್ಯಕ್ತಿಗೆ ಚಾಕು ಇರಿದಿದ್ದಾರೆ. ಮುಗ್ತಿಹಳ್ಳಿಯ ಅನಿಲ್ ಕುಮಾರ್ಗೆ ಎಂಬುವವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಆರೋಪಿ ಯುವಕ ಲಿಖಿತ್ನ್ನು ಪೊಲೀಸರು ವಶ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಅನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾರ್ನಲ್ಲಿ 2 ಗುಂಪುಗಳ ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version