ಕಳೆದೊಂದು ವರ್ಷದಿಂದ ಒಂದು ಹಿಟ್ ಸಿನಿಮಾಗಾಗಿ ಕಾಯ್ತಾ ಇದ್ದ ಕನ್ನಡ ಸಿನಿಪ್ರೇಕ್ಷಕರಿಗೆ “ಸು ಫ್ರಮ್ ಸೋ”ಸಿನಿಮಾ ತಂಪಾದ ಅನುಭವ ನೀಡಿದೆ. ಕಂಟೆಂಟ್ ಹಾಗೂ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳು ಕನ್ನಡ ಇಂಡಸ್ಟ್ರಿಯಲ್ಲಿ ಬರ್ತಿಲ್ಲ ಅನ್ನೋ ಸಿನಿಪ್ರೇಮಿಗಳ ಕೊರಗನ್ನ “ಸು ಫ್ರಮ್ ಸೋ” ನೀಗಿಸಿದ್ದು..”ಸು ಫ್ರಮ್ ಸೋ” ಸಿನಿಮಾ ಥಿಯೇಟರ್ನಲ್ಲಿ ಖಾಲಿಯಿದ್ದ ಸೀಟ್ಗಳನ್ನ ಭರ್ತಿಮಾಡಿ. ತನ್ನ ಕಂಟೆಂಟ್ ಹಾಗೂ ಕಾಮಿಡಿ ಕಚಗುಳಿಯ ಮೂಲಕ ಸಿನಿಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗುವಂತೆ ನಗೆಗಡಲಲ್ಲಿ ತೇಲಿಸಿದೇ.. “ಸು ಫ್ರಮ ಸೋ”ಗಾಗಿ ಕಳೆದ ಎಷ್ಟೋ ದಿನಗಳಿಂದ ಸಿನಿ ಪ್ರೇಮಿಗಳು ಕಾಯ್ತಾ ಇದ್ರೂ ಅಂದ್ರೆ ತಪ್ಪಾಗುವುದಿಲ್ಲ.
ಸಿನಿಮಾಗಳಿಲ್ಲ ಅಂತ ಬೇಸತ್ತಿದ್ದ ಸ್ಯಾಂಡಲ್ವುಡ್ ಮಂದಿಗೆ ಹೊಟ್ಟೆ ತುಂಬಾ ನಗಿಸಿ ತೃಪ್ತಿ ಕೊಟ್ಟ ಸಿನಿಮಾ ಇದಾಗಿದ್ದು.. ಒಂದು ಸ್ನಾನದ ಕಥೆ. ಎಲ್ಲೆಲ್ಲಿಂದಲೋ ಇನ್ನೆಲ್ಲಿಗೋ ಸಾಗುವ ಕಥಾಹಂದರಕ್ಕೆ ಅದ್ಭುತ ಮನರಂಜನೆಯ ಜೊತೆಗೆ. ಮೂಢನಂಬಿಕೆಗಳು, ಪೂರ್ವಗ್ರಹಗಳು ಎಲ್ಲವೂ ಮೆಸೇಜ್ ರೂಪದಲ್ಲಿ ಕಣ್ಣ ಮುಂದೆ ನಿಲ್ಲುತ್ತವೆ. ಒಬ್ಬೊಬ್ಬರ ನಟನೆಗೂ ಥಿಯೇಟರ್ ತುಂಬ ನಗುವೆ ಕೇಳಿಸುತ್ತಿದ್ದು. ನಿರ್ದೇಶಕ ಜೆಪಿ ತುಮ್ಮಿನಾಡು ನಟನೆಯಲ್ಲೂ ಎಲ್ಲರಿಗೂ ಇಷ್ಟವಾಗುತ್ತಾರೆ. ಮೈಂಡ್ ರಿಫ್ರೆಶ್ ಆಗ್ಬೇಕು ಅಂದ್ರೆ ಒಮ್ಮೆಯಾದರೂ ಇಂಥದ್ದೊಂದು ಸಿನಿಮಾ ನೋಡಿ ಅಂತ ಥಿಯೇಟರ್‌ಗೆ ಬಂದ ಆಡಿಯನ್ಸ್ ಹೇಳ್ತಿದ್ದು.. ಚಂದನವನದ ಗಲ್ಲಾಪೆಟ್ಟಿಗೆಯಲ್ಲಿ ಸದ್ಯ “ಸು ಫ್ರಮ್ ಸೋ” ಹವಾ ಜೋರಾಗಿದೆ..
‘ಸು ಫ್ರಂ ಸೋ’ ಸಿನಿಮಾ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ್ದು, ಬಿಡುಗಡೆ ಆದ ಮೂರನೇ ದಿನವೇ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ 2.4 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಕಲೆಕ್ಷನ್ 8 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

