Site icon BosstvKannada

ಹೊಸ ದಾಖಲೆ ಬರೆದ ಬ್ಯಾಂಗಲ್‌ ಬಂಗಾರಿ, ಯುವ ಸ್ಟೇಪ್ಸ್‌ಗೆ ಫ್ಯಾನ್ಸ್‌ ಫಿದಾ..!

ಎಕ್ಕ ಸಿನಿಮಾದ ಬ್ಯಾಂಗಲ್‌ ಬಂಗಾರಿ ಹಾಡು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. ಯುವ ರಾಜ್‌ಕುಮಾರ್-ಸಂಜನಾ ನಟಿಸಿರುವ ಈ ಹಾಡು ಬಿಡುಗಡೆ ಆದ 22 ದಿನಗಳಲ್ಲಿ ಹೊಸ ದಾಖಲೆ ಬರೆದಿದೆ. ಕನ್ನಡದಲ್ಲಿ ಈಗಾಗಲೇ ಕೆಲವು ಒಳ್ಳೆಯ ಹಾಡುಗಳನ್ನು ಹಾಡಿರುವ ಆಂಟೊನಿ ದಾಸನ್ ಅವರು ‘ಬ್ಯಾಂಗಲ್ ಬಂಗಾರಿ’ ಹಾಡನ್ನು ಹಾಡಿದ್ದಾರೆ. ಈ ಹಾಡು ಯೂಟ್ಯೂಬ್​​ನಲ್ಲಿ ಬಿಡುಗಡೆ ಆದ ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿದೆ.

ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದುಕೊಂಡಿದೆ. ತನ್ನಿಷ್ಟದ ಹುಡುಗಿಗೆ ಬಳೆ ತೊಡಿಸಿದಾಗ ಹುಡುಗ ಖುಷಿಯಿಂದ ಹಾಡುವ ಹಾಡು ಇದಾಗಿದ್ದು, ಈಗಾಗಲೇ ಹಲವಾರು ಮಂದಿ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ಪುಗಳನ್ನು ಹಾಕಿ, ರೀಲ್ಸ್​ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಜುಲೈ-18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.‌

Exit mobile version