Site icon BosstvKannada

ಸೇವೆ ಮುಕ್ತಾಯಗೊಳಿಸಿದ ಡಾ.ಅಲೋಕ್‌ ಮೋಹನ್‌, ಹೊಸ DG & IGP ಯಾಗಿ ಡಾ. ಎಂ.ಎ ಸಲೀಂ ನೇಮಕ

ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಐಜಿಪಿ) ಡಾ. ಅಲೋಕ್ ಮೋಹನ್ ಅವರು ಇಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಇದರಿಂದಾಗಿ, ಮುಂದಿನ ಡಿಜಿ ಐಜಿ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ಅದಕ್ಕೆ ಈಗ ತೆರೆ ಬಿದ್ದಿದೆ.. ಕನ್ನಡಿಗ ಹಾಗೂ ಹಿರಿಯ ಐಪಿಎಸ್‌ ಅಧಿಕಾರಿಯಾದ ಡಾ. ಎಂ. ಎ ಸಲೀಂ ಅವರನ್ನು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (DG & IGP) ಸ್ಥಾನಕ್ಕೆ ರಾಜ್ಯ ಸರ್ಕಾರ ನೇಮಕ ಮಾಡಿದೆ.

DG & IGP: 1993ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹಾಗೂ ಹಾಲಿ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಂಗಾಮಿ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸಲೀಂ ಅವರಿಗೆ ಡಾ. ಅಲೋಕ್ ಮೋಹನ್ ಅಧಿಕಾರ ಹಸ್ತಾಂತರಿಸಿದರು. ಸೇವಾವಧಿ ಪೂರ್ಣಗೊಳಿಸಿದ ಡಾ. ಅಲೋಕ್ ಮೋಹನ್ ಅವರನ್ನು ಗೌರವಪೂರ್ವಕ ಪಥಸಂಚಲನದ ಮೂಲಕ ಬೀಳ್ಕೊಡಲಾಯಿತು.

ಡಾ. ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ. ತಮ್ಮ ಸೇವಾ ಜೀವನದ ಆರಂಭದಲ್ಲಿ ಅವರು ಕಲಬುರಗಿಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದರು. ಡಿಜಿಪಿ ಆಗುವ ಮೊದಲು ಅವರು ಸಿಐಡಿಯಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Also Read: Chocolate ತಿನ್ನೋ ಮುಂಚೆ ಎಚ್ಚರ!

ರಾಜ್ಯದ ಪೊಲೀಸ್ ವ್ಯವಸ್ಥೆಗೆ ಅನುಭವಸಂಪನ್ನ ನಾಯಕತ್ವ ಒದಗಿಸುವ ಉದ್ದೇಶದಿಂದ ಡಾ. ಎಂ. ಎ ಸಲೀಂ ನೇಮಕಗೊಂಡಿದ್ದು, ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ ಅನ್ನೋದು ನಮ್ಮೆಲ್ಲರ ಆಶಯ.

Exit mobile version