BosstvKannada

ಪ್ರಧಾನಿ ಮೋದಿಯನ್ನ ʼಬೆಸ್ಟ್‌ ಫ್ರೆಂಡ್‌ʼ ಎಂದು ಬಣ್ಣಸಿದ ಡೊನಾಲ್ಡ್‌ ಟ್ರಂಪ್‌!

ಭಾರತದ ವಿರುದ್ಧ ಅಬ್ಬರಿಸುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ ಸದ್ಯ ತಣ್ಣಗಾರಿರೋ ಥರಾ ಕಾಣಿಸ್ತಿದೆ. ನಾವು ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಯೂಟರ್ನ್‌ ಹೊಡೆದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಬೆಸ್ಟ್‌ ಫ್ರೆಂಡ್‌ ಎಂದು ಟ್ರಂಪ್‌ ಬಣ್ಣಿಸಿದ್ದಾರೆ. ರಷ್ಯಾದ ತೈಲದ ಮೇಲಿನ ಸುಂಕಗಳು ಮತ್ತು ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತದ ನಡುವಿನ ಪ್ರಸ್ತುತ ಉದ್ವಿಗ್ನತೆಯ ಮಧ್ಯೆಯೂ ಈ ಹೇಳಿಕೆಗಳು ಎಲ್ಲರನ್ನ ಅಚ್ಚರಿಗೊಳಿಸಿವೆ. ಪ್ರಧಾನಿ ಮೋದಿ ಹಾಗೂ ಟ್ರಂಪ್‌ ಮಾಡಿರೋ ಪೋಸ್ಟ್‌ಗಳಿಂದ ಮತ್ತೆ ಅಮೆರಿಕ ಭಾರತ ಸಂಬಂಧ ಸಹಜ ಸ್ಥಿತಿಗೆ ಬಂದಂತೆ ಕಾಣುತ್ತಿದೆ.

ಚೀನಾ ವಿಚಾರವಾಗಿ ಪೋಸ್ಟ್‌ ಮಾಡಿದ ಒಂದು ದಿನದ ನಂತರ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ-ಅಮೆರಿಕ ಸಂಬಂಧವು ವಿಶೇಷವಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಲವಾದ ವೈಯಕ್ತಿಕ ಬಾಂಧವ್ಯವನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದೇನೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಭಾರತ-ಅಮೆರಿಕ ಸಂಬಂಧಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ನಾನು ಯಾವಾಗಲೂ ಮೋದಿ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ, ಅವರು ಉತ್ತಮ ಪ್ರಧಾನಿ. ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಸಂಬಂಧವಿದೆ, ಚಿಂತೆ ಮಾಡುವಂತದ್ದು ಏನೂ ಇಲ್ಲ’ ಎಂದು ಹೇಳಿದರು. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ‘ಭಾರತವನ್ನು ಕಳೆದುಕೊಳ್ಳುವುದು’ ಎಂಬ ಕಾಮೆಂಟ್‌ಗೆ ಸ್ಪಷ್ಟನೆ ನೀಡಿದ ಟ್ರಂಪ್, ‘ಇಂತಹದ್ದೇನೂ ಸಂಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು. ತಾನು ಮೋದಿ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇನೆ ಮತ್ತು ಕೆಲವೇ ತಿಂಗಳುಗಳ ಹಿಂದೆ ಅವರನ್ನು ರೋಸ್ ಗಾರ್ಡನ್‌ನಲ್ಲಿ ಭೇಟಿಯಾಗಿದ್ದೆ ಎಂದು ಹೇಳಿದರು.

Read Also : ಸಿದ್ದರಾಮಯ್ಯನವರೇ ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ ಎಂದಿದ್ದೇಕೆ ಆರ್‌ ಅಶೋಕ್‌

ಡೊನಾಲ್ಡ್ ಟ್ರಂಪ್ ಹೇಳಿಕೆಯ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ರೀ ಪೋಸ್ಟ್ ಮಾಡಿರುವ ಮೋದಿ, ಟ್ರಂಪ್ ರವರ ಭಾವನೆಗಳನ್ನ ಮತ್ತು ಅವರ ಸಕಾರಾತ್ಮಕತೆಗೆ ನಾನು ಪ್ರಶಂಶಿಸುತ್ತೆನೆ. ಅವರ ಭಾವನೆಗಳಿಗೆ ಸಂಪೂರ್ಣ ಸ್ಪಂದಿಸುತ್ತೆನೆ.ಭಾರತ ಮತ್ತು ಅಮೆರಿಕಾ ಬಹಳ ಸಕಾರಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದಿಂದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದಲ್ಲಿ ಜೊತೆಯಲ್ಲಿ ನಿಲ್ಲಲಿದೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

Exit mobile version