Site icon BosstvKannada

ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ರಾ ಡಾಕ್ಟರ್‌ ಬ್ರೋ..? ಈ ಸಲ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ?

ಬಿಗ್‌ಬಾಸ್‌ ಮನೆಯಿಂದ ಬಂತು ಬಿಗ್‌ ಆಪ್‌ಡೇಟ್‌.. ದೊಡ್ಮನೆಗೆ ಡಾ. ಬ್ರೋ ಬರೋದು ಫಿಕ್ಸ್!, ಡಾಕ್ಟರ್‌ ಬ್ರೋ ಈ ಕಾರಣಕ್ಕೆ ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ರಾ?, ಅಷ್ಟಕ್ಕೂ ಡಾಕ್ಟರ್‌ ಬ್ರೋ ಯೂಟ್ಯೂಬ್‌ಗೆ ಬ್ರೇಕ್‌ ಕೊಟ್ಟಿದ್ಯಾಕೆ? ಬಿಗ್‌ಬಾಸ್‌ಗೆ ಬರೋದು ಪಕ್ಕಾನಾ? ಅನ್ನೋ ವದಂತಿಗಳು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ..

ಬಿಗ್‌ಬಾಸ್‌ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ.. ಸೀಸನ್‌ 11 ಯಶಸ್ವಿಯಾಗಿ ಮುಗಿದ ನಂತರ ಮತ್ತೆ ಧೂಳೆಬ್ಬಿಸಲು ಕಿಚ್ಚನ ಸಾರಥ್ಯದಲ್ಲಿ ಸೀಸನ್‌ 12 ಬರ್ತಿದೆ. ನಮಸ್ಕಾರ ದೇವ್ರು.. ಅಂತಾನೆ ಕನ್ನಡಿಗರ ಮನದಲ್ಲಿ ಅಚ್ಚೆ ಹಾಕಿರುವ ಖ್ಯಾತ ಕನ್ನಡದ ಯುಟ್ಯೂಬರ್ ಡಾ. ಬ್ರೋ ಬಿಗ್‌ಬಾಸ್‌ ಮನೆಗೆ ಬರ್ತಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿದೆ.‌

ಯೂಟ್ಯೂಬ್‌ಗೆ ಗುಡ್‌ಬೈ, ಬಿಗ್‌ಬಾಸ್‌ಗೆ ಜೈ?

ಸದ್ಯ ಈ ಅನುಮಾನ ಬರೋಕೆ ಕಾರಣಗಳು ಇದೆ. ಅದು ಏನಂದ್ರೆ, ಯೂಟ್ಯೂಬ್‌ನಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ಗಗನ್‌ ಅವರಿಗೆ ಬರೋಬ್ಬರಿ 2 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಆದರೆ ಅವರು ಕಳೆದ ಐದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್‌ಲೋಡ್‌ ಮಾಡಿಲ್ಲ. ಹಾಗಾಗಿ, ಡಾ. ಬ್ರೋ ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ GO ಪ್ರವಾಸದಲ್ಲಿ ಸ್ವಲ್ಪ ಬ್ಯುಸಿ ಇರುವ ಗಗನ್‌, ಇದರ ನಡುವೆ ಬಿಗ್‌ಬಾಸ್‌ ತಂಡ ದೊಡ್ಮನೆಗೆ ಬರಲು ಬುಲಾವ್‌ ಕೊಟ್ಟಿದೆ ಎನ್ನಲಾಗಿದೆ.

DR.BRO ಬಿಗ್‌ಬಾಸ್‌ ಮನೆಗೆ ಹೋಗ್ತಾರೆ?

ಇನ್ನು ಡಾ.ಬ್ರೋ ತಮ್ಮ ಯೂಟ್ಯೂಬ್‌ ವಿಡಿಯೋಗಳಲ್ಲಿ ಹಾಸ್ಯಮಯ ಮತ್ತು ತಮ್ಮ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಯುವಕರನ್ನು ತಮ್ಮ ಶೈಲಿಯಿಂದ ಆಕರ್ಷಿಸಿರುವ ಡಾ.ಬ್ರೋ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಹೆಚ್ಚಿನ ಯುವ ಪ್ರೇಕ್ಷಕರನ್ನು ಸೆಳೆಯಬಹುದು. ಹಾಗೆಯೇ ಡಾ.ಬ್ರೋಗೆ ತಮ್ಮ ನೇರವಾದ ಮಾತುಗಾರಿಕೆಯಿಂದ ಈಗಲೇ ದೊಡ್ಡ ಫ್ಯಾನ್ಸ್‌ ಬಳಗವೇ ಇದೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ಬಾಸ್‌ ಅಭಿಮಾನಿಗಳು ಹಾಗೂ ಡಾ. ಬ್ರೋ ಅಭಿಮಾನಿಗಳು ಗಗನ್‌ ಬಿಗ್‌ಬಾಸ್‌ ಮನೆಗೆ ಬರಲೇಬೇಕು ಅಂತಾ ಹೇಳಿಕೊಂಡಿದ್ದಾರೆ. ಹೀಗಾಗಿ, ಡಾಕ್ಟರ್‌ ಬ್ರೋ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡೋದು ಕನ್ಫರ್ಮ್‌ ಅಂತಾ ಹೇಳಲಾಗ್ತಿದೆ.

ಆದೇನೆ ಆಗಲಿ ಇನ್ಮುಂದೆ ನಾನು ಬಿಗ್‌ಬಾಸ್‌ ಮಾಡಲ್ಲ ಅಂತಿದ್ದ ಕಿಚ್ಚ ಮತ್ತೆ ಬಂದ್ರೂ, 3 ತಿಂಗಳು ಒಂದೇ ಮನೆಯಲ್ಲಿ ಇರೋಕೆ ಆಗಲ್ಲ ಅಂತಿದ್ದ ಡಾ. ಬ್ರೋ ಬರೋದು ಪಕ್ಕನಾ? ಅನ್ನೋದನ್ನ ಬಿಗ್‌ಬಾಸ್‌ ದೇವ್ರೇ ಹೇಳಬೇಕು.. ಇದಕ್ಕೆ ನೀವೇನ್‌ ಹೇಳ್ತಿರಾ? ಕಮೆಂಟ್‌ ಮಾಡಿ ಹೇಳಿ.

Read Also : ರಾಜಸ್ಥಾನದ ಬೆಡಗಿಗೆ.. ಮಿಸ್‌ ಯೂನಿವರ್ಸ್‌ ಇಂಡಿಯಾ ಕಿರೀಟ..!

Exit mobile version