Site icon BosstvKannada

ಡಿಕೆಶಿಗೆ ಹಲವು ಮುಖಗಳಿವೆ, ಕೆಪಿಸಿಸಿ ಅಧ್ಯಕ್ಷರಾಗಿ RSS ಪ್ರಾರ್ಥನೆ ಹಾಡಿದ್ದು ತಪ್ಪು.. ಕ್ಷಮೆ ಕೇಳಬೇಕು ಎಂದ ಬಿಕೆ ಹರಿಪ್ರಸಾದ್‌

ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೇ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು. ಅಧ್ಯಕ್ಷರಾಗಿ ಹೇಳಿದ್ರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇಂತಹ ಹೇಳಿಕೆ ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು ಎಲ್ಲಾರೂ ಇರುತ್ತಾರೆ. ಆರ್‌ಎಸ್‌ಎಸ್, ತಾಲಿಬಾನ್‌ಗಳು ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ, ಹೇಳಿದ್ರೆ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದರು.

Read Also : ಬಾನು ಮುಷ್ತಾಕ್‌ ಆಯ್ಕೆಗೆ ಪ್ರತಾಪ್‌ ಸಿಂಹ ವಿರೋಧ : ಕನ್ನಡಾಂಬೆಯನ್ನ ಒಪ್ಪದ ಮುಷ್ತಾಕ್‌, ನಾಡದೇವಿಯನ್ನ ಒಪ್ಪಿಯಾರೇ? ಎಂದು ಪ್ರಶ್ನೆ

ಮಹಾತ್ಮ ಗಾಂಧಿ ಕೊಂದವರು ಆರ್‌ಎಸ್‌ಎಸ್‌ನವರು. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಯಾರಿಗೆ ಸಂದೇಶ ಕೊಡಲು ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹಲವು ಮುಖಗಳು ಇವೆ. ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕರಣಿ ಅಂತಾ ಹಲವು ಮುಖಗಳಿವೆ. ಗಾಂಧಿ ಕೊಂದ ಸಂಘಟನೆ ಬಗ್ಗೆ ಹೀಗೆ ಹೇಳಿದ್ದಾರೆ. ಇದು ಯಾರಿಗಾದ್ರು ಸಂದೇಶ ಕೊಡುತ್ತಿರಬಹುದು ಎಂದರು.

Exit mobile version