Site icon BosstvKannada

ಚಿತ್ರೀಕರಣದ ವೇಳೆ ಏಕಾಏಕಿ ಕುಸಿದು ಬಿದ್ದು ನಿರ್ದೇಶಕ ಸಾವು!

ಬೆಂಗಳೂರು: ಚಿತ್ರೀಕರಣದ ವೇಳೆ ಏಕಾಏಕಿ ಕುಸಿದು ಬಿದ್ದು ನಿರ್ದೇಶಕರೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಕೊಪ್ಪದಲ್ಲಿ ಚಿತ್ರದ ಶೂಟಿಂಗ್ ನಡೆದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸಂಗೀತ್ ಸಾಗರ್ ಸಾವನ್ನಪ್ಪಿರುವ ನಿರ್ದೇಶಕ. ‘ಪಾತ್ರಧಾರಿ’ ಎಂಬ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಂಗೀತ್ ಸಾಗರ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸಂಗೀತ್ ಸಾಗರ್ ಅವರು ಹಿಂದೆ ಓ ಪ್ರೀತಿಯಾ, ಸ್ನೇಹಿತ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಕೆಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಸಂಗೀತ್ ಅವರ ಮೃತದೇಹವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಅವರ ಪತ್ನಿ ಸುಶ್ಮಿತಾ ಹಾಗೂ ಮಗಳು ವಂಧ್ಯಾ ಧಾವಿಸಿದ್ದಾರೆ. ಇಡೀ ಸಿನಿಮಾ ತಂಡ ಸ್ಥಳದಲ್ಲಿ ಇತ್ತು ಎನ್ನಲಾಗಿದೆ.

Exit mobile version