Site icon BosstvKannada

ದುಡ್ಡು ಪಡೆದು ಉಲ್ಟಾ ಹೊಡೆದ್ರಾ ಶರಣು ಸಲಗರ?

ಬೀದರ್: ಉದ್ಯಮಿಯಿಂದ ದುಡ್ಡು ಪಡೆದು ಶರಣು ಸಲಗರ್ ಉಲ್ಟಾ ಹೊಡೆದ್ರಾ ಎಂಬ ಅನುಮಾನವೊಂದು ವ್ಯಕ್ತವಾಗುತ್ತಿದೆ.

99 ಲಕ್ಷ ರೂ. ಸಾಲ ಪಡೆದು ಹಿಂತಿರುಗಿಸದ ಆರೋಪದ ಮೇಲೆ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಈಗಾಗಲೇ ಎಫ್ ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಶಾಸಕರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಉದ್ಯಮಿ ಸಂಜು ಸುಗುರೆ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶರಣು ಸಲಗರ್ ನೀಡಿದ ಬೆನ್ನಲ್ಲೇ ಇದೀಗ ಆಡಿಯೋ ವೈರಲ್ ಆಗಿದೆ. ಸಲಗರ್ ಮನೆಗೆ ಉದ್ಯಮಿ ಸಂಜು ಅವರ ಪತ್ನಿ ಹಾಗೂ ಮಗ ಸಲಗರ್ ಅವರ ಮನೆಗೆ ಹೋದಾಗ ನಡೆದ ಸಂಭಾಷಣೆಯ ಆಡಿಯೋ ಇದು ಎನ್ನಲಾಗಿದೆ.

ನೀವು ಈ ಬಗ್ಗೆ ಹೇಳುವ ಹಾಗಿಲ್ಲ, ಇದರಲ್ಲಿ ಮಧ್ಯೆ ಬರುವಂತಿಲ್ಲ. ದುಡ್ಡು ಕೊಟ್ಟಿದ್ದು ಅವನು, ತೆಗೆದುಕೊಂಡವನು ನಾನು ಎನ್ನುತ್ತಾರೆ. ಆಗ ಸಂಜು ಅವರ ಪತ್ನಿ ಮಾತನಾಡಿ, ನೀವು ಫೋನ್ ರಿಸೀವ್ ಮಾಡುತ್ತಿಲ್ಲ, ಅದಕ್ಕೆ ನಾವು ಕೇಳಲು ಬಂದಿದ್ದೇವೆ. ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ನೀವು ಜಮೀನು ಬರೆದುಕೊಳ್ಳಿ ಎಂದಿದ್ರಿ, ಆದರೆ ನಾವು ನಿಮ್ಮ ಮೇಲಿನ ನಂಬಿಕೆ ಹಾಗೂ ಭರವಸೆಯಿಂದ ಬೇಡ ಎಂದಿದ್ದೆವು ಎಂದು ಹೇಳಿದ್ದಾರೆ. ಆಗ ಶರಣು, ಯಾವಾಗಲು ಫೋನ್ ರಿಸೀವ್ ಮಾಡ್ತೀನಿ, ನಿಮ್ಮ ಬಳಿ ಬೇರೆ ಸಾಕ್ಷಿಗಳಿದ್ದರೆ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಈ ಆಡಿಯೋ ಈಗ ವೈರಲ್ ಆಗಿದೆ.

ಈ ಕುರಿತು ಈಗಾಗಲೇ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕ ಸಲಗರ್ ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ. ಸಾಲ ಪಡೆದಿದ್ದಾರೆಂದು ಉದ್ಯಮಿ ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದ್ದು, ಸಾರ್ವಜನಿಕ ಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

Exit mobile version