ಬೆಂಗಳೂರು, ಮಾ.21: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ಧುರಂಧರ್ 2 ಸಿನಿಮಾ ಕಲೆಕ್ಷನ್ ಕಿಂಗ್ ಆಗಿ ಅಬ್ಬರಿಸುತ್ತಿದೆ. ಧುರಂಧರ್ 2 ಸಿನಿಮಾ ರಿಲೀಸ್ ಆದ ಎರಡನೇ ದಿನದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು, ದಾಖಲೆಗಳೆಲ್ಲಾ ಉಡೀಸ್ ಆಗಿವೆ. ಹೌದು. ಮಾರ್ಚ್ 19ರಂದು ವರ್ಲ್ಡ್ ವೈಡ್ ರಿಲೀಸ್ ಆಗಿರುವ ಧುರಂಧರ್ 2 ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹಾಗೂ ಸಿನಿ ಮಂದಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಧುರಂಧರ್-2 ಚಿತ್ರವು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭರ್ಜರಿ ದಾಖಲೆ ಮಾಡಿದೆ. ಭಾರತದಲ್ಲಿ ಮೊದಲ ದಿನವೇ 100 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಸಿನಿಮಾ, ಎರಡನೇ ದಿನವಾದ ಶುಕ್ರವಾರ 80 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇದ್ರ ಜೊತೆಗೆ ಅಡ್ವಾನ್ಸ್ ಬುಕಿಂಗ್ ಸೇರಿ ಹಲವು ಮೂಲಗಳಿಂದ 43 ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಇದೆಲ್ಲವೂ ಸೇರಿ ಸಿನಿಮಾ ರಿಲೀಸ್ ಆದ 2 ದಿನದಲ್ಲಿ 226 ಕೋಟಿ ಗಳಿಸಿದೆ ಅಂತಾ ಹೇಳಲಾಗ್ತಿದೆ.
2000 ಕೋಟಿ ಗಳಿಸುತ್ತಾ ಧುರಂಧರ್ 2 ಸಿನಿಮಾ?
ಈಗಾಗ್ಲೇ ಎರಡು ದಿನ ಭರ್ಜರಿ ಆರ್ಭಟಿಸಿರುವ ಧುರಂಧರ್ 2 ಸಿನಿಮಾ ವೀಕೆಂಡ್ ಇದಕ್ಕೂ ಅಬ್ಬರ ಜೋರಾಗುವ ನಿರೀಕ್ಷೆ ಇದೆ. ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸಾಧ್ಯತೆ ಇದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ತಲುಪಬಹುದು ಅಂತಾ ಸಿನಿ ತಜ್ಞರು ಅಂದಾಜಿಸಿದ್ದಾರೆ. ಇನ್ನು, ಸಿನಿಮಾದಲ್ಲಿ ರಣವೀರ್ ಸಿಂಗ್ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ನೋಡಿರುವ ಸ್ಟಾರ್ಸ್, ರಣವೀರ್ ನಟನೆಯನ್ನು ಹಾಡಿ ಹೊಗಳಿದ್ದಾರೆ. ಇದ್ರ ಜೊತೆಗೆ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಆರ್. ಮಾಧವನ್ ಸೇರಿದಂತೆ ತಾರೆಯರ ದಂಡೇ ಇದ್ದು, ಒಬ್ಬೊಬ್ಬರ ನಟನೆಯೂ ಅಭಿಮಾನಿಗಳ ಮನಮುಟ್ಟುವಂತಿದೆ.
1400 ಕೋಟಿ ಗಳಿಸಿದ್ದ ಧುರಂಧರ್ ಪಾರ್ಟ್ 1 :
ಇನ್ನು, 2025ರ ಡಿಸೆಂಬರ್ 5ರಂದು ತೆರೆಕಂಡಿದ್ದ ‘ಧುರಂಧರ್’ ಚಿತ್ರ ಕೂಡ ಕಲೆಕ್ಷನ್‌ನಲ್ಲಿ ಭಾರಿ ದಾಖಲೆ ಮಾಡಿತ್ತು. ಅಂದಾಜು 475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಒಟ್ಟು 1,300 ರಿಂದ 1,428 ಕೋಟಿ ಗಳಿಸಿತ್ತು ಅಂತಾ ಅಂದಾಜಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಬಂದಿರುವ ಈ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್‌ನ ಹಿಂದಿನ ದಾಖಲೆಗಳನ್ನೆಲ್ಲಾ ಬ್ರೇಕ್ ಮಾಡುವ ನಿರೀಕ್ಷೆ ಇದೆ.

