ದೊಡ್ಮನೆ ದೋಸ್ತಿಗೆ ಅಭಿಮಾನಿ ಫುಲ್‌ ಫಿದಾ!

ಕನ್ನಡದ ಬಿಗ್​ಬಾಸ್​ ಸೀಸನ್​ 11 (Bigg Boss Kannada season 11)ಗ್ರ್ಯಾಂಡ್​ ಫಿನಾಲೆಗೆ(Grand Finale) ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಸಖತ್​ ಅಲರ್ಟ್​ ಆಗಿದ್ದಾರೆ. ಟಿಕೆಟ್​ ಟು ಫಿನಾಲೆಗೆ ಹೋಗಬೇಕು ಅಂತ ಸ್ಪರ್ಧಿಗಳು ತುಂಬಾ ಆಸೆ ಇಟ್ಟುಕೊಂಡಿದ್ದರೆ, ಈ ನಡುವೆ ಧನು ಹಾಗೂ ಹನುಮಂತು ದೋಸ್ತಿಗೆ ಬಿಗ್‌ಬಾಸ್‌ ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.. ಅಷ್ಟಕ್ಕೂ ದೊಡ್ಮನೆಯಲ್ಲಿ ಆಗಿದ್ದೇನು? ಅಂತ ಹೇಳ್ತೀವಿ.

ಬಿಗ್‌ಬಾಸ್‌ ಚದುರಂಗ ಆಟ ದಿನದಿಂದ ದಿನಕ್ಕೆ ಸಖತ್‌ ಟ್ವಿಸ್ಟ್‌ ಪಡೆದುಕೊಳ್ತಿದ್ದು, ಅದರಂತೆ ಎಲ್ಲಾ ಸ್ಪರ್ಧಿಗಳು ಫಿನಾಲೆ ಟಿಕೆಟ್‌ ಪಡೆದುಕೊಳ್ಳಲು ನಾನಾ? ನೀನಾ ಅಂತ ಬಿಗ್​ಬಾಸ್​ ಕೊಡುವ ಟಾಸ್ಕ್​ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಆದ್ರೆ, ಬಿಗ್​ಬಾಸ್​ ಕೊಟ್ಟ ಟಿಕೆಟ್ ಟು ಫಿನಾಲೆ ಟಾಸ್ಕ್​ನಲ್ಲಿ ಭವ್ಯಾಗೌಡ, ಹನುಮಂತ, ತ್ರಿವಿಕ್ರಮ್​ ಹಾಗೂ ರಜತ್​ ಆಯ್ಕೆಯಾಗಿದ್ದಾರೆ. ಗೌತಮಿ(Gautami), ಮಂಜು, ಚೈತ್ರಾ, ಧನರಾಜ್​ ಹಾಗೂ ಮೋಕ್ಷಿತಾ ಟಿಕೆಟ್ ಟು ಫಿನಾಲೆ ಟಾಸ್ಕ್​ ಆಡೋದನ್ನು ಮಿಸ್​ ಮಾಡಿಕೊಂಡಿದ್ದಾರೆ. ಇನ್ನು, ಗೌತಮಿ(Gautami), ಮಂಜು ಹಾಗೂ ಧನರಾಜ್ ಮೂವರು ಸೇರಿ ಯಾರನ್ನು ಫಿನಾಲೆಯಿಂದ ಹೊರಗಿಡಬೇಕು ಅನ್ನೋದರ ಕುರಿತು ಬಿಸಿ ಬಿಸಿ ಚರ್ಚೆ ನಡೆಸಿದ್ದರು.

ಈ ಚರ್ಚೆಯಲ್ಲಿ ಗೌತಮಿ (Gautami)ಹಾಗೂ ಮಂಜಣ್ಣ ಧನರಾಜ್​ ಅವರನ್ನು ಫಿನಾಲೆಯಿಂದ ಹೊರಗೆ ಇಟ್ಟಿದ್ದಾರೆ. ಇದರಿಂದ ಬೇಸರಗೊಂಡಿದ್ದ ಧನರಾಜ್​ ಅವರನ್ನು ಯಾವಾಗಲೂ ದೋಸ್ತಾ ದೋಸ್ತಾ ಅಂತಿದ್ದ ಹನುಮಂತ (Hanumantha)ಸಮಾಧಾನ ಮಾಡಿದ್ದಾರೆ. ನಿನ್ನದೇ ತಪ್ಪು ದೋಸ್ತಾ, ಮೊನ್ನೆ ನೀನು ಹಾಗೇ ಒಪ್ಪಿಕೊಳ್ಳಬಾರದಿತ್ತು. ನೋಡು ನಿನಗೆ ಹೇಗೆ ಮಾಡಿದ್ರು, ಬಿಡು ದೋಸ್ತಾ ಇಷ್ಟು ದಿನ ಮಸ್ತ್​ ಆಟ ಆಡಿದೀಯಾ. ಯಾಕೆ ಚಿಂತೆ ಮಾಡ್ತೀಯಾ ಅಂತ ಸಮಾಧಾನ ಮಾಡಿ, ಧೈರ್ಯ ತುಂಬಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ಮೊದಲ ದಿನದಿಂದ ಹನುಮಂತ ಹಾಗೂ ಧನರಾಜ್​ ಎಂತಹ ಗೆಳೆಯರು ಅಂತ ಎಲ್ಲರಿಗೂ ಗೊತ್ತೇ ಇದೆ. ಅಂದಿನಿಂದ ಇಂದಿನವರೆಗೂ ಟಾಸ್ಕ್​ ಅಂತ ಬಂದಾಗ ಈ ಇಬ್ಬರು ವೈರಿಗಳ ಹಾಗೇ ಆಡುತ್ತಾರೆ. ನಾಮಿನೇಷನ್​ ಪ್ರಕ್ರಿಯೆಯಲ್ಲೂ ಕೂಡ ಗೆಳೆಯ ಅಂತ ನೋಡದೇ ನಾಮಿನೇಟ್ ಮಾಡ್ತಾರೆ. ಆದ್ರೆ, ಗೆಳೆಯ ಬೇಸರದಲ್ಲಿ ಇದ್ದಾನೆ ಅಂದಾಗ ಇಷ್ಟು ಸಮಾಧಾನ ಮಾಡುವ ಒಬ್ಬ ದೋಸ್ತಾ ಇದ್ದರೆ ಚೆನ್ನಾಗಿರುತ್ತೆ ಅಂತಾ ವೀಕ್ಷಕರ ಈ ಇಬ್ಬರ ಗೆಳತನಕ್ಕೆ ಜೈ ಎನ್ನುತ್ತಿದ್ದಾರೆ.

ಆದೇನೆ ಆಗಲಿ… ಬಿಗ್‌ಬಾಸ್‌ ಮನೆಯಲ್ಲಿ ಫೈನಲ್‌ ತಲುಪಲು ಸ್ಪರ್ಧಿಗಳು, ಸ್ನೇಹ ಮತ್ತು ಸಂಬಂಧವನ್ನು ದೂರ ಇಟ್ಟಿದ್ದು, ಇದ್ರ ನಡುವೇ ಧನು ಮತ್ತು ಹನುಮಂತು ಫ್ರೆಂಡ್‌ಶಿಫ್‌ ಮಾತ್ರ ಎಲ್ಲರ ಹೃದಯ ಮುಟ್ಟಿದ್ದಂತೂ ಸುಳ್ಳಲ್ಲ.. ಇದಕ್ಕೆ ನೀವೇನ್‌ ಹೇಳ್ತೀರ ಅಂತಾ ಕಮೆಂಟ್‌ ಮಾಡಿ ಹೇಳಿ..

Share.
Leave A Reply