Site icon BosstvKannada

ಭಕ್ತಿಯೇ ಅದ್ಭುತ ಶಕ್ತಿ – ಪಾದಯಾತ್ರೆಯಿಂದ Kedarnath ತಲುಪಿದ ಕಲಬುರಗಿಯ ವೃದ್ಧ

Kedarnath

ಮಾನವ ಜೀವನದಲ್ಲಿ ಭಕ್ತಿ, ಆತ್ಮಸ್ಥೈರ್ಯ ಮತ್ತು ಶ್ರದ್ಧೆ ಮನುಷ್ಯನನ್ನು ಎಷ್ಟೇ ದೂರಕ್ಕೂ ಕರೆದೊಯ್ಯಬಲ್ಲವು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭಕ್ತಿ ಎಂಬುದು ಕೇವಲ ಆಚರಣೆ ಅಲ್ಲ. ಅದು ಮನಸ್ಸಿನ ಶ್ರದ್ಧೆ, ಶರೀರದ ಶ್ರಮ ಮತ್ತು ಆತ್ಮದ ಶುದ್ಧತೆಯಿಂದ ಕೂಡಿರುವ ಶಕ್ತಿಯ ಪ್ರಕಾರ. ಈ ಮಾತಿಗೆ ಜೀವಂತ ಸಾಕ್ಷಿಯಂತೆ ಕನ್ನಡ ನಾಡಿನಿಂದ, ಕಲಬುರಗಿ ಜಿಲ್ಲೆಯಿಂದ 70 ವರ್ಷದ ವೃದ್ಧರು ಪಾದಯಾತ್ರೆಯಿಂದಲೇ ಉತ್ತರಾಖಂಡದ Kedarnath ತಲುಪಿದ್ದಾರೆ. ಅವರ ನಂಬಿಕೆಯೆಂಬ ಶಕ್ತಿ ಅದೆಷ್ಟು ಬಲಶಾಲಿಯೆಂಬುದರ ಬಗ್ಗೆ ಜಗತ್ತಿಗೆ ತಿಳಿಸಿದ್ದಾರೆ.

ಈ ಪಾದಯಾತ್ರೆ ಮಾರ್ಚ್ 3 ರಂದು ಕಲಬುರಗಿಯಿಂದ ಪ್ರಾರಂಭವಾಯಿತು. ದಕ್ಷಿಣ ಭಾರತದ ಬಿಸಿಲು, ಬಯಲು ಭೂಮಿಗಳು, ಕಾಡುಗಳು ಹಾಗೂ ನೂರಾರು ಕಿಮೀ ದೂರದ ಪರ್ವತಶ್ರೇಣಿಗಳ ನಡುವೆ ದಿನಗೂಡಾಗುತ್ತಿದ್ದಂತೆಯೇ ಸಾಗಿದ ಈ 60 ದಿನಗಳ ಪಾದಯಾತ್ರೆ ಸುಮಾರು 2,200 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿ Kedarnath ತಲುಪಿದಾಗ ಭಕ್ತಿಯ ಫಲ ಸಿಕ್ಕಿದ್ದಂತಾಗಿದೆ.

ಮಂದಾಕಿನಿ ನದಿಯ ದಂಡೆಯ ಮೇಲಿರುವ Kedarnath ದೇವಾಲಯದ ಸನ್ನಿಧಾನಕ್ಕೆ ತಲುಪಿದ ನಂತರ ಅವರು ಭೋಲೇನಾಥನ ದರ್ಶನ ಪಡೆದರು. ತಮ್ಮ ಮುಖದಲ್ಲಿ ಕಳೆದುಹೋದ ಎಲ್ಲ ಶ್ರಮ, ದೈಹಿಕ ತೊಂದರೆ ಮರೆತು ಕೇವಲ ಆಧ್ಯಾತ್ಮಿಕ ತೃಪ್ತಿ ಬಿಂಬಿತವಾಗಿತ್ತು. “ಇದೇ ಮೊದಲ ಬಾರಿಗೆ ಕೇದಾರನಾಥಕ್ಕೆ ಬಂದಿದ್ದೇವೆ. ಎಷ್ಟು ದಿನ ಬೇಕಾಗುತ್ತೆ ಅಂತಾ ಯೋಚಿಸಿದ್ದೆವು, ಆದರೆ ದೇವರ ಕೃಪೆಯಿಂದ ಪಾದಯಾತ್ರೆ ಬೇಗನೆ ಪೂರ್ಣವಾಯಿತು,” ಎಂದು ಅವರು ತಿಳಿಸಿದ್ದಾರೆ.

Also Read: Skin ಒರಟಾಗಿದ್ಯಾ? ಮಲಗೋ ಮೊದ್ಲು ಹೀಗ್‌ ಮಾಡಿ

ಈ ಪಾದಯಾತ್ರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಹುತೆಕ ಜನರಿಗೆ ಸ್ಫೂರ್ತಿಯ ಮೂಲವಾಗಿವೆ. “ಪ್ರತಿ ಹೆಜ್ಜೆಯಲ್ಲಿ ದೇವರ ಆಶೀರ್ವಾದ ನಮ್ಮೊಂದಿಗಿತ್ತು,” ಎಂಬ ಅವರ ಮಾತುಗಳು ನಿಜಕ್ಕೂ ಮನಸನ್ನು ಮುಟ್ಟುವಂತಿದ್ದು, ಭಕ್ತಿಯ ಪರಾಕಾಷ್ಠೆಯನ್ನೇ ಮೆರೆದಿದ್ದಾರೆ.

Exit mobile version