Bengaluru ಹರೇ ಕೃಷ್ಣ ದೇವಸ್ಥಾನ ಅಧಿಕಾರದ ವಿಷಯವಾಗಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಇಸ್ಕಾನ್ ಮುಂಬೈ ಪರ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸುಪ್ರೀಂ ಕೋರ್ಟ್ ಕಟಕಟೆ ಏರಿತ್ತು.
ವಾದ ವಿವಾದದ ನಂತರ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಬೆಂಗಳೂರು ಇಸ್ಕಾನ್ ಪರ ತೀರ್ಪು ನೀಡಿದೆ. ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನದ ಒಡೆತನ ಸಂಬಂಧ 2011 ರ ಮೇ 23ರಂದು ಕರ್ನಾಟಕ ಹೈಕೋರ್ಟ್ ಹರೇ ಕೃಷ್ಣ ದೇವಸ್ಥಾನ ಇಸ್ಕಾನ್ ಮುಂಬೈ ಅಧಿಕಾರಕ್ಕೆ ಸೇರುತ್ತದೆ ಅಂತಾ ಹೇಳಿತ್ತು.
Also Read: IMFನಿಂದ ಪಾಕ್‌ಗೆ ನೆರವು , ಪುನಃ ಪರಿಶೀಲಿಸುವಂತೆ ಸಚಿವ ರಾಜನಾಥ್ ಸಿಂಗ್ ಒತ್ತಾಯ
ಬೆಂಗಳೂರು ಇಸ್ಕಾನ್ ಸೊಸೈಟಿ 2011 ರ ಜೂನ್ 2ರ ಈ ತೀರ್ಪಿನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.. ಈಗ ದಶಕದ ಈ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಿದೆ.. ಹರೇ ಕೃಷ್ಣ ದೇವಸ್ಥಾನಕ್ಕೂ ಇಸ್ಕಾನ್ ಮುಂಬೈಗೂ ಯಾವುದೇ ಸಂಬಂಧ ಇಲ್ಲ. ಹರೇ ಕೃಷ್ಣ ದೇವಸ್ಥಾನ ಬೆಂಗಳೂರು ಇಸ್ಕಾನ್‌ಗೆ ಸೇರಿದ್ದು ಅಂತಾ ಮಹತ್ವದ ತೀರ್ಪು ಹೊರಡಿಸಿದೆ.
