BosstvKannada

ದಾಸ-ರಮ್ಯಾ ಬಿಕ್ಕಟ್ಟು, ದೊಡ್ಮನೆಗೆ ಇಕ್ಕಟ್ಟು : ದೊಡ್ಮನೆ ಕುಟುಂಬದ ವಿರುದ್ಧ ಯುವ ಪತ್ನಿ ಅಸಮಾಧಾನ ಯಾಕೆ?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ದರ್ಶನ್‌ ಫ್ಯಾನ್ಸ್‌ ರಮ್ಯಾ ಅನ್ನುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರ ಮಧ್ಯೆ ಈಗ ರಮ್ಯಾ, ದರ್ಶನ್‌ ಜಗಳಕ್ಕೆ ಟ್ವಿಸ್ಟ್‌ ಒಂದು ಸಿಕ್ಕಿದ್ದು, ರಾಜ್‌ ಮನೆತನದ ಕಿರಿ ಸೊಸೆ ಶಿವಣ್ಣ, ವಿನಯ್‌ಗೆ ಸರಿಯಾಗಿ ಟಾಂಗ್‌ ಕೊಟ್ಟಿದ್ದಾರೆ. ಅಷ್ಟಕ್ಕೂ ಯುವ ಪತ್ನಿ ಸಿಡಿದೇಳಲು ಇದೇ ಕಾರಣ.

ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳಿಸಿದ್ದನ್ನು ಹಲವರು ಖಂಡಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್‌ ಕುಟುಂಬದ ಹೀರೋಗಳು ಕೂಡ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಮಾಡಿರುವ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಸದ್ಯ ಈ ಪೋಸ್ಟ್‌ ಸಖತ್‌ ಸಂಚಲನದ ಜೊತೆಗೆ ಬಿರುಗಾಳಿ ಎಬ್ಬಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಬೆಂಬಲಿಸಿ ಹಲವು ನಟ-ನಟಿಯರು ಹಾಗೂ ರಾಜ್‌ ಕುಟುಂಬದವ್ರು ಪೋಸ್ಟ್‌ಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಯುವರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಬೈರಪ್ಪ ಕೂಡ ಒಂದು ಪೋಸ್ಟ್‌ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಸುಮ್ಮನೆ ಇದ್ರಲ್ಲ. ಅವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ? ಎಂದು ಪೋಸ್ಟ್‌ ಮಾಡಿದ್ದಾರೆ. ಇದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇನ್ನು ಯುವ ಪತ್ನಿ ಶ್ರೀದೇವಿ ಭೈರಪ್ಪ ಮಾಡಿದ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ಪೇಜ್​​ಗಳಲ್ಲಿ ಅದನ್ನು ಶೇರ್ ಮಾಡಿ ‘ಶಿವಣ್ಣ ಅವರು ಶ್ರೀದೇವಿಗೆ ಈಗಲಾದರೂ ನ್ಯಾಯ ಕೊಡಿಸುತ್ತಾರಾ? ನಿಮ್ಮ ಮನೆಯಿಂದಲೇ ನ್ಯಾಯ ಶುರುವಾಗಬೇಕು ಎಂದು ದರ್ಶನ್ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ..

ಇನ್ನು, ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಇಬ್ಬರೂ ಲವ್‌ ಕಮ್‌ ಅರೆಂಜ್ ಮ್ಯಾರೇಜ್‌ ಆಗಿದ್ದರು.. ‌ಆದ್ರೆ, ಯುವ ಸಿನಿಮಾ ಆದ್ಮೇಲೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ದೂರಾಗಿದ್ದರು. ವಿಚ್ಛೇದನ ವಿಚಾರವೂ ಕೋರ್ಟ್‌ನಲ್ಲಿದ್ದು, ಸದ್ಯ ಪರಸ್ಪರ ದೂರವಾಗಿ ಜೀವನ ನಡೆಸುತ್ತಿದ್ದಾರೆ. ಇದ್ರ ಮಧ್ಯೆ ರಮ್ಯಾ ವಿಚಾರದಲ್ಲಿ ಧ್ವನಿ ಎತ್ತಿರುವ ಶಿವಣ್ಣ ಹಾಗೂ ವಿನಯ್‌ರಾಜ್‌ಕುಮಾರ್‌ ವಿರುದ್ಧ ಶ್ರೀದೇವಿ ಅಸಮಾಧಾನ ಹೊರಹಾಕಿದ್ದು, ಭಾರಿ ಸಂಚಲನ ಸೃಷ್ಟಿಸಿದೆ..

Exit mobile version