ಕಿಚ್ಚ ಸುದೀಪ್ ಯುದ್ಧ ಸಾರಿದ ನಂತರ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಶುರುವಾಯಿತು. ಸುದೀಪ್ ಮಾತಿಗೆ ವಿಜಯಲಕ್ಷ್ಮಿ ತಿರುಗೇಟು ಕೊಟ್ಟಿದ್ದರು. ಆನಂತರ ಅವರ ವಿರುದ್ಧ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ಸ್ ಗಳನ್ನು ಮಾಡಿದ್ದಾರೆ. ಹೀಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸೋಷಿಯಲ್ ಮೀಡಿಯಾ (Social Media)ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಮತ್ತೊಂದು ಸ್ಟೋರಿ ಹಾಕಿದ್ದಾರೆ.
ಇತ್ತೀಚೆಗೆ ಮಹಿಳೆಯರನ್ನ ಮೀಮ್ಸ್‌ಗಳ ಮೂಲಕ ಟ್ರೋಲ್ (Trol) ಮಾಡೋದು ಸಾಮಾನ್ಯವಾಗಿದೆ. ಆದರೆ ಮಹಿಳೆ ತುಂಬಾ ಶಕ್ತಿಶಾಲಿʼ ಎಂದು ವಿಡಿಯೋದೊಂದಿಗೆ ಹಂಚಿಕೊಂಡಿದ್ದಾರೆ. ಈ ಸಾಲುಗಳೊಂದಿಗೆ ಮಹಿಳೆಯರು ವಿವಿಧ ಸಂದರ್ಭಗಳಲ್ಲಿ ಎದುರಿಸುವ ಕಠಿಣ ಸವಾಲುಗಳ ಭಾವುಕ ವಿಡಿಯೋ ತುಣುಕನ್ನು ಕೂಡ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಗಳು ಒಂದೆಡೆ ವಿಜಯಲಕ್ಷ್ಮಿ ಟ್ರೋಲ್ ಮಾಡುತ್ತಿದ್ದರೆ, ಇನ್ನೊಂದೆಡೆ ಸುದೀಪ್ ಪುತ್ರಿಯನ್ನೂ ಟ್ರೋಲ್ ಮಾಡುತ್ತಿದ್ದಾರೆ. ಈಗ ಮಹಿಳೆಯರನ್ನು ಟಾರ್ಗೆಟ್ ಮಾಡಿದವರ ವಿಜಯಲಕ್ಷ್ಮಿ ತಿರುಗೇಟು ನೀಡಿದ್ದಾರೆ.

