
ಬರೋಬ್ಬರಿ ಆರು ತಿಂಗಳ ನಂತ್ರ ದರ್ಶನ್ ಹಾಗೂ ಪವಿತ್ರಗೌಡ(Darshan-Pavitra) ಮುಖಾಮುಖಿಯಾಗಿದ್ದಾರೆ.. ಹೌದು.. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳು ಬೆಂಗಳೂರಿನ(Bangalore) ಸಿಸಿಎಚ್ 57 ನ್ಯಾಯಾಲಯಕ್ಕೆ ಹಾಜರಾಗಿದ್ರು. ಖುದ್ದು ಎಲ್ಲ ಆರೋಪಿಗಳು ಹಾಜರಾಗಬೇಕೆಂಬ ಸೂಚನೆ ಮೇರೆಗೆ ಕೋರ್ಟ್‌ಗೆ ಬಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ, ಕಟಕಟೆಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡರನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಲಯಕ್ಕೆ ಬಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ (Darshan-Pavitra)ಬರೋಬ್ಬರಿ 06 ತಿಂಗಳ ಬಳಿಕ ಮುಖಮುಖಿ ಆಗಿದ್ದಾರೆ. ನ್ಯಾಯಾಲಯಕ್ಕೆ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದರು. ದರ್ಶನ್ ಅವರ ಆರೋಗ್ಯವನ್ನು ಪವಿತ್ರಾ ಗೌಡ ವಿಚಾರಿಸಿದರು. ಪವಿತ್ರಾ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಆ ಬಳಿಕ ಪವಿತ್ರಾ ಆರೋಗ್ಯವನ್ನು ದರ್ಶನ್ ವಿಚಾರಿಸಿದ್ದಲ್ಲದೆ, ಅವರ ಬೆನ್ನು ಸವರಿ ಸಂತೈಸಿದರು ಅಂತಾ ಹೇಳಲಾಗ್ತಿದೆ. ಇದಾದ ನಂತರ ಬಂದ ನ್ಯಾಯಾಧೀಶರು, ಎಲ್ಲರ ಹಾಜರಿ ಪಡೆದು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಮತ್ತೆ ಮುಂದಿನ ತಿಂಗಳು 25ರಂದು ಎಲ್ಲ ಆರೋಪಿಗಳು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ… ಇದೇ ಹೊತ್ತಲ್ಲಿ ಪವಿತ್ರಾಗೌಡ ಹೊರರಾಜ್ಯದ ದೇಗುಲಕ್ಕೆ( ಭೇಟಿ ನೀಡಲು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ..