Site icon BosstvKannada

ದರ್ಶನ್‌ ಮತ್ತೆ ಜೈಲಿಗೆ.. ಸಂಪೂರ್ಣ ವಿಚಾರಣೆ ಮುಗಿಯೋವರೆಗೂ ಬೇಲ್‌ಗೆ ಮೇಲ್ಮನವಿ ಸಲ್ಲಿಸುವಂತಿಲ್ಲ : ʼಸುಪ್ರೀಂʼ ಆದೇಶ

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್‌ ಕೇಸ್‌ ಮತ್ತೆ ಭಾರೀ ಸದ್ದು ಮಾಡಿದೆ.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ದರ್ಶನ್‌, ಪವಿತ್ರಾ ಸೇರಿ 7 ಆರೋಪಿಗಳಿಗೆ ಮತ್ತೆ ಚಳಿ ಜ್ವರ ಶುರುವಾಗಿದೆ. ಯಾಕಂದ್ರೆ ಯಾವ ಕಾರಣಕ್ಕೆ ಈ ಆರೋಪಿಗಳು ಹೊರಬಂದಿದ್ರೋ ಈಗ ಅದೇ ಕಾರಣ ಮುಳ್ಳಾಗಿದೆ.. ಅವರ ಜಾಮೀನು ರದ್ದುಗೊಂಡಿದೆ.. ಮತ್ತೆ ಜೈಲಿಗೆ ಹೋಗೋದು ಫಿಕ್ಸ್‌ ಆಗಿದೆ.. ಡೆವಿಲ್ ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದ ದರ್ಶನ್‌ಗೆ ದಿಢೀರ್‌ ದೊಡ್ಡ ಶಾಕ್‌ ಎದುರಾಗಿದೆ.

ಸುಪ್ರೀಂಕೋರ್ಟ್‌ ಜಾಮೀನು ರದ್ದು
ದರ್ಶನ್‌ ಅಂಡ್‌ ಗ್ಯಾಂಗ್‌ಗೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.. ಇದೇ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು, ಸುಪ್ರೀಂಕೋರ್ಟ್‌ ಜಾಮೀನು ರದ್ದು ಮಾಡಿದೆ.. ಹೈಕೋರ್ಟ್‌ ತೀರ್ಪಿನಲ್ಲಿ ದೋಷವಿದೆ.. ದಾಖಲೆಗಳ ವಿರುದ್ಧ ತೀರ್ಪು ನೀಡಲಾಗಿದೆ.. ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂತ ಹೇಳಿರೋದು ತಪ್ಪು, ಸಾಕ್ಷಿಗಳ ಹೇಳಿಕೆ ತಡವಾಗಿ ದಾಖಲಿಸಲಾಗಿದೆ ಅಂತ ಅನುಮಾನ ಪಟ್ಟಿರೋದು ಸರಿಯಿಲ್ಲ.. ದರ್ಶನ್‌ಗೆ ಈ ಹಿಂದೆ ಅಪರಾಧದ ಹಿನ್ನೆಲೆ ಇದೆ. ಹೀಗೆ ಹಲವಾರು ಕಾರಣಗಳನ್ನು ಕೊಟ್ಟು ಕೋರ್ಟ್‌ ಜಾಮೀನು ರದ್ದು ಮಾಡಿದೆ.. ಕೂಡಲೇ ದರ್ಶನ್‌ ಹಾಗೂ ಇತರೆ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದೆ.

ಬಳ್ಳಾರಿ ಸೆಂಟ್ರಲ್‌ ಜೈಲಿಗೆ ದರ್ಶನ್‌
ಕೋರ್ಟ್‌ ಏನೋ ಶರಣಾಗುವಂತೆ ಸೂಚಿಸಿದೆ.. ಆದ್ರೆ ದರ್ಶನ್‌ ನಿನ್ನೆ ರಾತ್ರಿ ಮಡಿಕೇರಿಗೆ ಹೋಗಿದ್ದಾರೆ ಅಂತಾ ಹೇಳಲಾಗ್ತಿದ್ದು, ಇದೀಗ ಮಡಿಕೇರಿಯಿಂದ ಮೈಸೂರಿನತ್ತ ವಾಪಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್‌ ಏನು ಮಾಡ್ತಾರೆ ಅನ್ನೋದೇ ಪ್ರಶ್ನೆಯಾಗಿದೆ.. ಕೂಡಲೇ ಬಂದು ಪೊಲೀಸರಿಗೆ ಶರಣಾಗಬೇಕಿದೆ.. ಇಲ್ಲದಿದ್ರೆ, ಪೊಲೀಸರು ಕೋರ್ಟ್‌ನಿಂದ ವಾರಂಟ್‌ ಪಡೆದು ಪೊಲೀಸರು ಬಂಧಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಪೊಲೀಸರು ದರ್ಶನ್‌ಗಾಗಿ ಹುಡುಕಾಟ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ.. ಪವಿತ್ರಾಗೌಡ ಕೂಡ ಸದ್ಯ ತಮ್ಮ ಆರ್‌ಆರ್‌ ನಗರದ ನಿವಾಸದಲ್ಲಿದ್ದಾರೆ… ದರ್ಶನ್‌ ಜಾಮೀನು ಕ್ಯಾನ್ಸಲ್‌ ಆಗಿರುವ ಕಾರಣ ಮತ್ತೆ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಹೋಗಲಿದ್ದಾರೆ.. ಈ ಹಿಂದೆ ಕೂಡ ಸುಮಾರು 2 ತಿಂಗಳುಗಳ ಕಾಲ ದರ್ಶನ್‌ ಇದೇ ಸೆರೆಮನೆವಾಸವನ್ನು ಅನುಭವಿಸಿದ್ರು.

ಇಂದೇ ದರ್ಶನ್‌ ಪೊಲೀಸರಿಗೆ ಶರಣಾಗತಿ
ಕೇವಲ ಜಾಮೀನು ಮಾತ್ರವಲ್ಲದೇ ಸುಪ್ರೀಂಕೋರ್ಟ್‌ ಜೈಲಾಧಿಕಾರಿಗಳಿಗೂ ಸಖತ್‌ ಕ್ಲಾಸ್‌ ತೆಗೆದುಕೊಂಡಿದೆ.. ಈ ಹಿಂದೆ ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯವನ್ನು ನೀಡಲಾಗಿತ್ತು.. ಆದ್ರೆ ಈ ಬಾರಿ ಅದು ಮರುಕಳಿಸಬಾರದು.. ಜೈಲಾಧಿಕಾರಿಗಳ ವಿರುದ್ಧ ಅಂದೇ ಕ್ರಮ ತೆಗೆದುಕೊಳ್ಳಬೇಕಾಗಿತ್ತು.. ಆದ್ರೆ ಈ ಬಾರಿ ಮಾತ್ರ ದರ್ಶನ್‌ಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಬಾರದು.. ಯಾವುದೇ ಚಿಕಿತ್ಸೆ ಬೇಕಿದ್ರೆ ಜೈಲಿನಲ್ಲೇ ವ್ಯವಸ್ಥೆಯಾಗಲಿ ಆಗಲಿ ಅಂತ ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ.. ಮತ್ತೊಂದು ಮಾಹಿತಿ ಪ್ರಕಾರ ದರ್ಶನ್‌ ಇಂದೇ ಶರಣಾಗಲಿದ್ದಾರೆ ಅಂತ ಕೂಡ ಹೇಳಲಾಗ್ತಿದೆ..

read this also: Darshan-Pavitra:6 ತಿಂಗಳ ಬಳಿಕ ದರ್ಶನ್-ಪವಿತ್ರಾ ಮುಖಾಮುಖಿ!

ಇನ್ನೊಂದು ವಿಚಾರ ಅಂದ್ರೆ, ದರ್ಶನ್‌ ಹಾಗೂ ಪವಿತ್ರಗೌಡಗೆ ಈ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯೋವರೆಗೂ ಬೇಲ್‌ಗೆ ಮೇಲ್ಮನವಿ ಸಲ್ಲಿಸುವಂತಿಲ್ಲ ಅಂತಾ ಸುಪ್ರೀಂಕೋರ್ಟ್‌ ಹೇಳಿದೆ.. ಹೀಗಾಗಿ, ತನಿಖೆ ಮುಗಿದ ಮೇಲೆ ದರ್ಶನ್‌ ಹಾಗೂ ಪವಿತ್ರಾಗೌಡಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.. ಅಲ್ಲಿವರೆಗೆ ದರ್ಶನ್‌ಗೆ ಜೈಲೇ ಗತಿ ಅಂತಾ ಹೇಳಲಾಗ್ತಿದೆ.. ಏನೇ ಆದ್ರೂ ದರ್ಶನ್‌ ಮತ್ತಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸೋ ಸಾಧ್ಯತೆಯೇ ಹೆಚ್ಚಿದೆ..

Exit mobile version