Site icon BosstvKannada

ʼಮೋಹಕ ತಾರೆʼಗೆ ಡಿ-ಫ್ಯಾನ್ಸ್ ಅಶ್ಲೀಲ ಕಾಮೆಂಟ್‌: ರಮ್ಯಾ ಕಂಪ್ಲೇಂಟ್‌ ಕೊಟ್ರೆ, ದರ್ಶನ್ ಫ್ಯಾನ್ಸ್‌ ವಿರುದ್ಧ‌ ಕ್ರಮ-ಪರಮೇಶ್ವರ್‌

ದರ್ಶನ್‌ ಫ್ಯಾನ್ಸ್‌ Vs ಮೋಹಕ ತಾರೆ ರಮ್ಯಾ ನಡುವಿನ ಜಟಾಪಟಿ ಎಲ್ಲೆಡೆ ವೈರಲ್‌ ಆಗಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ನಟಿ ರಮ್ಯಾ ದೂರು ಕೊಟ್ಟರೆ, ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವ ಜಿ. ಪರಮೇಶ್ವರ್‌, ನಟಿ ದೂರು ಕೊಟ್ಟರೆ, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಅಲ್ಲದೇ ನಮ್ಮಲ್ಲಿ ಕೆಲವು ಪ್ರಕರಣದಲ್ಲಿ ಸ್ವಯಂಪ್ರೇರಿತ ತಗೋತಾರೆ. ಆ ಥರ ಏನಾದ್ರೂ ಅವಕಾಶ ಇದ್ರೆ ಪೊಲೀಸರು ಪರಿಶೀಲನೆ ಮಾಡ್ತಾರೆ ಅಂತಲೂ ಹೇಳಿದ್ದಾರೆ.

ಇನ್ನೂ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದರ ಸಂಪೂರ್ಣ ಮಾಹಿತಿ ಇನ್ನೂ ಬರಬೇಕು. ರಾಜಾರೋಷವಾಗಿ ಇಲ್ಲಿ ಡ್ರಗ್ಸ್ ತಯಾರಿಸ್ತಿದ್ರು ಅನ್ನೋದು ಆತಂಕದ ವಿಚಾರ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಸ್ಥಳೀಯ ಠಾಣೆಯವರಿಗೆ ಗೊತ್ತಾಗಿಲ್ಲ, ಬಾಂಬೆ ಪೊಲೀಸರು ಬಂದು ದಾಳಿ ಮಾಡ್ತಾರೆ ಅಂದ್ರೆ ನಮ್ಮದೇ ಲೋಪ ಎದ್ದು ಕಾಣ್ತದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, ಎಸ್‌ಪಿಗಳಿಗೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜಿಲೆಟಿನ್ ಕಡ್ಡಿಗಳ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿ, ಕ್ವಾರಿಗಳಿಗೆ ಅಂತ ಇದನ್ನ ಇಟ್ಟಿದ್ರು ಅನ್ನೋದು ಮಾಹಿತಿ ಇದೆ. ಆತ ಪೊಲೀಸರು ಬಂದ್ರು ಅಂತ ಹೆದರಿ ಅಲ್ಲೇ ಬಿಟ್ಟು ಹೋಗಿದ್ದಾನೆ. ಯಾರಿಗೋ ಅದನ್ನು ಕೊಡಬೇಕಿತ್ತು, ಪೊಲೀಸರನ್ನು ನೋಡಿ ಅಲ್ಲೇ ಬಿಟ್ಟು ಹೋಗಿದ್ದಾನೆ ಅಂತ ನನಗೆ ಮಾಹಿತಿ ಬಂದಿದೆ. ಇದರ ಬಗ್ಗೆ ಇನ್ನೂ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ.

Exit mobile version