ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂದಿದ್ದಕ್ಕೆ ಆರೋಪಿ ನಟ ದರ್ಶನ್ ಫ್ಯಾನ್ಸ್ ಕೆಟ್ಟಾಗಿ ಕಾಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ಸದ್ಯ ಬಿರುಗಾಳಿ ಬೀಸಿದೆ. ನಟಿ ರಮ್ಯಾ ಪರ ಹಲವು ನಟರು ನಿಂತಿದ್ದಾರೆ.
ಇದೀಗ ನಟ ಶಿವರಾಜ್ ಕುಮಾರ್ ಸಹ ನಟಿ ರಮ್ಯಾ ಬೆನ್ನಿಗೆ ನಿಂತಿದ್ದು ಈ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ.
ನಟ ರಮ್ಯಾ ನಿಲುವು ಸರಿಯಾಗಿದೆ. ರಮ್ಯಾ ಜತೆ ನಾವು ಸದಾ ನಿಲ್ಲುತ್ತೇವೆ. ನಟಿ ರಮ್ಯಾ ವಿರುದ್ದ ಬಳಸಿದ ಪದ ಖಂಡನೀಯ. ಯಾವ ಮಹಿಳೆ ವಿರುದ್ದವೂ ಮಾತನಾಡಿವುದು ಸರಿಯಲ್ಲ. ಈ ರೀತಿಯ ಹೇಳಿಕೆ ನೀಡಬಾರದು. ತಾಯಿ, ಅಕ್ಕ, ಮಗಳಾಗಿ ಗೌರವಿಸಬೇಕು. ಸೋಶಿಯಲ್ ಮಿಡಿಯಾವನ್ನ ಏಳಿಗೆಗಾಗಿ ಬಳಸಬೇಕೆ ವಿನಃ ದುರುದ್ದೇಶಕ್ಕಲ್ಲ ಅಂತಾ ರಮ್ಯಾ ಪರ ಪೋಸ್ಟ್ ಮಾಡಿ, ದರ್ಶನ್ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ನಿನ್ನೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಖುದ್ದು ಭೇಟಿ ಮಾಡಿ, ದೂರು ನೀಡಿದ್ದಾರೆ.
