BosstvKannada

ಹವಾಲಾ ಸುಳಿಯಲ್ಲಿ ಸಿಲುಕಿದ ಕ್ರಿಕೆಟಿಗರು : ರಾಬಿನ್‌ ಉತ್ತಪ್ಪ, ಯುವರಾಜ್ ಸಿಂಗ್​​​ಗೆ​ ಇಡಿ ಶಾಕ್!

ದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಫುಲ್‌ ಆ್ಯಕ್ಟಿವ್‌ ಆಗಿರುವ ಇಡಿ, ಭಾರತೀಯ ಕ್ರಿಕೆಟಿಗರಿಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ ರಾಬಿನ್‌ ಉತ್ತಪ್ಪ ಹಾಗೂ ಯುವರಾಜ್‌ ಸಿಂಗ್‌ ಅವರಿಗೂ ಸಮನ್ಸ್ ಜಾರಿ ಮಾಡಿದೆ. 1 ಎಕ್ಸ್ ಬೆಟ್ ಹೆಸರಿನ ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮವಾಗಿ ಹವಾಲಾ ದಂಧೆ ಮಾಡುತ್ತಿರುವ ಶಂಕೆ ಇದ್ದ ಕಾರಣ ಈ ಇಬ್ಬರು ಭಾರತೀಯ ಆಟಗಾರನ್ನ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

ಈ ಹಿಂದೆಯೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟ್‌ ಆಟಗಾರರಾದ ಸುರೇಶ್‌ ರೈನಾ ಮತ್ತು ಶಿಖರ್‌ ಧವನ್‌ ಅವರನ್ನು ವಿಚಾರಣೆ ನಡೆಸಿದ್ದ ಇ.ಡಿ ಇದೀಗ ಇನ್ನಿಬ್ಬರಿಗೆ ಸಮನ್ಸ್ ಜಾರಿ ಮಾಡಿದೆ. ಕನ್ನಡಿಗ ರಾಬಿನ್‌ ಉತ್ತಪ್ಪ ಅವರಿಗೆ ಸೆಪ್ಟೆಂಬರ್‌ 22ರಂದು ವಿಚಾರಣೆ ಹಾಜರಾಗುವಂತೆ ಇಡಿ ಸೂಚಿಸಿದ್ದು, ಯುವರಾಜ್‌ ಸಿಂಗ್‌ಗೆ 23ರಂದು ವಿಚಾರಣೆಗೆ ಬರುವಂತೆ ಹೇಳಿದೆ. ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ಗಳ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಯುವರಾಜ್‌ ಮತ್ತು ಉತ್ತಪ್ಪ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ. ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ಜೊತೆ ಸಂಬಂಧ ಹೊಂದಿರುವ ಎಲ್ಲಾ ಸೆಲೆಬ್ರಿಟಿಗಳಿಗೂ ಇ.ಡಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.

Read Also : ಕಾಂಗ್ರೆಸ್‌ಗೆ ಬಿಗ್ ಶಾಕ್ : ಕೆ.ವೈ.ನಂಜೇಗೌಡ MLA​ ಸ್ಥಾನ ಅಸಿಂಧುಗೊಳಿಸಿದ ಹೈಕೋರ್ಟ್

Exit mobile version