Covid guidelines: ರಾಜ್ಯದಲ್ಲಿ ಮಳೆ ನಡುವೆ ಕೊರೊನಾ ಕ್ರಿಮಿಯ ಅಬ್ಬರ ಜೋರಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರದಿಂದ ರಾಜ್ಯದಾದ್ಯಂತ ಶಾಲೆಗಳು ಪುನಾರಂಭ ಆಗ್ತಿವೆ..
ಇಷ್ಟು ದಿವಸ ಸ್ಕೂಲ್ ಬಗ್ಗೆ ಚಿಂತೆಯಿಲ್ಲದೇ ಹಾಯ್‌ಯಾಗಿ ಮನೆಯಲ್ಲಿ ಮಜಾ ಮಾಡ್ತಾ ಸಮ್ಮರ್ ಹಾಲಿಡೇ (Summer holidays)ಯನ್ನ ಎಂಜಾಯ್ ಮಾಡ್ತಿದ್ದ ಮಕ್ಕಳಿಗೆ ಈಗ ಸ್ಕೂಲ್‌ಗೆ ಹೋಗೋ ಚಿಂತೆ ಶುರುವಾಗಿದೆ. ಸ್ಕೂಲ್‌ಗೆ ಹೋಗಬೇಕು ಅನ್ನೋ ಹೊತ್ತಲ್ಲೇ ಕೊರೊನಾ ರಾಜ್ಯಕ್ಕೆ ಮತ್ತೆ ಎಂಟ್ರಿ ಕೊಟ್ಟಿದೆ. ಹಾಗಂತ ಸ್ಕೂಲ್‌ಗೆ ಚಕ್ಕರ್ ಹಾಕೋಕಾಗುತ್ತಾ.. ಸಾಧ್ಯನೇ ಇಲ್ಲಾ.. ಸೋ ಮಕ್ಕಳು ಶಾಲೆಗೆ ಆರಾಮಾಗಿ ಹೋಗಬೇಕು ಅಂತಾನೆ ರಾಜ್ಯ ಸರ್ಕಾರ ಹೊಸ ಗೈಡ್‌ಲೈನ್ಸ್ (Covid guidelines) ಜಾರಿ ಮಾಡಿದೆ..
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಗೈಡ್‌ಲೈನ್ಸ್ ನೀಡಲಾಗಿದ್ದು, ಶಾಲಾ ಶಿಕ್ಷಕರು ಹಾಗೂ ಪೋಷಕರಿಗೆ ಕೆಲವು ಮಹತ್ವದ ಸೂಚನೆ ಇಲಾಖೆ ನೀಡಿದೆ. ಕೋವಿಡ್-19ಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಿದೆ…

ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಕೋವಿಡ್ ನಿಯಂತ್ರಣ ಜೊತೆಗೆ ಡೆಂಗ್ಯೂ ಕಾಪಾಡಿಕೊಳ್ಳೋದು ಸವಾಲಾಗಿದೆ.
ಇದರಿಂದ ಮೊನ್ನೆ ಕೋವಿಡ್ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ಮಕ್ಕಳಲ್ಲಿ ನೆಗಡಿ, ಜ್ವರ, ಕೆಮ್ಮು ಇದ್ದರೆ ಅವರಿಗೆ ಕಡ್ಡಾಯವಾಗಿ ರಜೆ ನೀಡಬೇಕೆಂದು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಆರೋಗ್ಯ ಇಲಾಖೆ (Karnataka Health Department)ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಮಾರ್ಗಸೂಚಿ(Covid guidelines) ಪ್ರಕಟಿಸಿದೆ.
Also Read: CSR ನಿಧಿಯಡಿ ಪಬ್ಲಿಕ್ ಶಾಲೆ ನಿರ್ಮಾಣ ಯೋಜನೆ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ
ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಅವರು ಹೊಸ ಗೈಡ್ ಲೈನ್ಸ್ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್ ನಲ್ಲೆನಿದೆ?
ವಿದ್ಯಾರ್ಥಿಗಳಲ್ಲಿ ಕೋವಿಡ್ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ಅವರ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು. ಅಲ್ಲದೇ ಶಾಲಾ ಸಿಬ್ಬಂದಿಯಲ್ಲಿ ಗುಣಲಕ್ಷಣ ಕಂಡು ಬಂದಲ್ಲಿ ಮುಂಜಾಗೃತ ಕ್ರಮ ಪಾಲಿಸಬೇಕು. ಹಾಗೇ ಶಾಲೆಗಳಲ್ಲಿ ಸ್ವಚ್ಛತೆ, ಹಾಗೂ ಕೋವಿಡ್ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ದಿನೇ ದಿನೇ ಕೊವಿಡ್ (Coronavirus) ಆತಂಕ ಹೆಚ್ಚಾಗುತ್ತಿದೆ.. ಇದರ ಜೊತೆ ದೇಶದ ಹಲವು ರಾಜ್ಯದಲ್ಲೂ ಸೋಂಕಿನ ಸಂಖ್ಯೆ ಹೆಚ್ಚು ಆಗುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.