ಶಾಲಾ ಮಕ್ಕಳ ಬೇಸಿಗೆ ರಜೆ ಮುಗಿದಾಯ್ತು.. ಇನ್ನೇನು ಮತ್ತೆ ಶಾಲಾ ಬಾಗಿಲು ತೆರೆಯುವ ಸಮಯ.. ಆದ್ರೆ, ಇಂಥಾ ಹೊತ್ತಲ್ಲಿ ಮತ್ತೆ ಮಹಾಮಾರಿ Corona ಕಾಡುತ್ತಿದೆ. ಮಕ್ಕಳನ್ನು ಶಾಲೆಗೆ ಕಳಿಸಬೇಕಾ? ಬೇಡ ಅನ್ನೋ ಆತಂಕ ಪೋಷಕರಲ್ಲಿ ಹೆಚ್ಚಾಗಿ ಉಲ್ಬಣಿಸಿದೆ.. ಆ ಚಿಂತೆ ದೂರ ಮಾಡೋಕೆ ಶಿಕ್ಷಣ ಇಲಾಖೆಯೋ ಹೊಸದೊಂದು ಪ್ಲ್ಯಾನ್ ಮಾಡಿದೆ. ಹೊಸ ಗೈಡ್‌ಲೈನ್ಸ್ ಜಾರಿ ಮಾಡಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಸಜ್ಜಾಗಿದೆ..
ರಾಜ್ಯದಲ್ಲಿ ಈಗಾಗ್ಲೇ Corona ಸೋಂಕು ಮತ್ತೆ ಆರ್ಭಟಿಸುತ್ತಿದ್ದು, ಸಕ್ರಿಯ ಕೇಸ್‌ಗಳಲ್ಲಿ ಶತಕ ಬಾರಿಸಿದೆ.. ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್ಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.. ಮಕ್ಕಳು, ವೃದ್ಧರನ್ನು ಹೆಚ್ಚಾಗಿ ಕಾಡುತ್ತಿದೆ. ಇನ್ನೇನು ಬೇಸಿಗೆ ರಜೆ ಮುಗಿಸಿ ಶಾಲೆಗಳು ಶುರುವಾಗ್ತಿದೆ ಅನ್ನೋವಾಗಲೇ ರಾಜಧಾನಿ ಬೆಂಗಳೂರಿನಲ್ಲಿಯೇ ಅಧಿಕ ಕೇಸ್ಗಳು ದಾಖಲಾಗುತ್ತಿದ್ದು, ಶಾಲಾ- ಕಾಲೇಜುಗಳಲ್ಲಿ ಪ್ರತ್ಯೇಕ ಮಾರ್ಗಸೂಚಿ ಸಿದ್ದಪಡಿಸಲಾಗಿದೆ..
ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೂ ಇಷ್ಟು ದಿನ ಬೇಸಿಗೆ ರಜೆ ನೀಡಲಾಗಿತ್ತು. ಇದೀಗ ಎಲ್ಲಾ ಶಾಲಾ- ಕಾಲೇಜುಗಳು ಪುನಾರಂಭವಾಗುತ್ತಿದೆ. ಈ ಮಧ್ಯೆ Corona ಅಲೆ ಶುರುವಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ಪ್ರತ್ಯೇಕ ಕೊರೊನಾ ಮಾರ್ಗಸೂಚಿಗಳನ್ನು ಸಿದ್ಧ ಮಾಡಲಾಗಿದೆ.. ಕೆಮ್ಮು, ಶೀತ, ಜ್ವರ ಸೇರಿದಂತೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ರೆ ಮಕ್ಕಳಿಗೆ ಕಡ್ಡಾಯ ರಜೆ ನೀಡಲು ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.. ಹಾಗಾದ್ರೆ, ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿ ಏನೇನಿದೆ ಅಂತಾ ನೋಡೋದಾದ್ರೆ,
ಮಕ್ಕಳಿಗೆ ಕೊರೊನಾ ಗೈಡ್‌ಲೈನ್ಸ್
- ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಡ್ಡಾಯ
- ಕೆಮ್ಮು, ಶೀತ, ಜ್ವರ ಇರುವ ಮಕ್ಕಳಿಗೆ ಕಡ್ಡಾಯ ರಜೆ ನೀಡಬೇಕು
- ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಮಾಸ್ಕ್ ಧರಿಸಿಕೊಂಡರೆ ಉತ್ತಮ
- ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಾಸ್ಕ್ ಧರಿಸಿ ಕಳಿಸಿ
ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಕೆಮ್ಮು, ಶೀತ, ಜ್ವರ ಇರುವ ಮಕ್ಕಳಿಗೆ ಕಡ್ಡಾಯ ರಜೆ ನೀಡಬೇಕು ಅಂತಾ ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಮಾಸ್ಕ್ ಧರಿಸಿಕೊಂಡರೆ ಉತ್ತಮ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಾಸ್ಕ್ ಧರಿಸಿ ಕಳುಹಿಸಿ ಸೇರಿದಂತೆ ಹಲವು ಅಂಶಗಳ ಮಾರ್ಗಸೂಚಿ ರೆಡಿಯಾಗಿದೆ.
Also Read: ಟೌನ್ ಹಾಲ್ನಲ್ಲಿ ಜೈ ಹಿಂದ್ ಕಾರ್ಯಕ್ರಮ : ಯೋಧರಿಗಾಗಿ ಸಿಎಂ Siddaramaiah ಮಹತ್ವದ ಘೋಷಣೆ
ಇನ್ನು, ಈ ಗೈಡ್‌ಲೈನ್ಸ್ ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದ ಎಲ್ಲಾ ಶಾಲಾ – ಕಾಲೇಜುಗಳಿಗೆ ಅನ್ವಯವಾಗುತ್ತದೆ ಅಂತಾ ಹೇಳಲಾಗಿದೆ. ಇಂದು ಶಿಕ್ಷಣ ಇಲಾಖೆ ಈ ಮಾರ್ಗಸೂಚಿಯನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.. ಅಂತಿಮವಾಗಿ ಯಾವೆಲ್ಲಾ ರೂಲ್ಸ್ ಬರಲಿದೆ ಅನ್ನೋ ಗೊಂದಲಕ್ಕೆ ತೆರೆ ಬೀಳಲಿದೆ.