ಧನು ಮಾಡಿದ ಎಡವಟ್ಟು ಉಗ್ರಾವತಾರ ತಾಳಿದ ಕಾಕ್ರೋಚ್.. ಸೋಲಿನ ಮೇಲೆ ಸೋಲು.. ಬಿಗ್ ಸ್ಪರ್ಧಿಗಳ ಟೈಮೇ ಸರಿ ಇಲ್ಲ. ಅಷ್ಟಕ್ಕೂ ದೊಡ್ಮನೆ ಗಲಾಟೆಗೆ ಕಾರಣ ಏನು? ಬಿಗ್‌ಬಾಸ್ ಮನೆಯಲ್ಲಿ ಇವತ್ತೂ ಕೂಡ ಸ್ಪರ್ಧಿಗಳ ಮಧ್ಯೆ ಜಗಳ ನಡೆದಿದೆ. ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ, ಅಭಿಷೇಕ್, ಧ್ರುವಂತ್, ಧನುಷ್‌ಗೌಡ ನಡುವಿನ ಜಗಳ ವಿಚಾರ ಹೆಚ್ಚು ಸೌಂಡ್ ಮಾಡ್ತಿತ್ತು. ಆದರೆ ಇವತ್ತಿನ ಸಂಚಿಕೆಯಲ್ಲಿ ಚಂದ್ರಪ್ರಭ ಹಾಗೂ ಕಾಕ್ರೋಚ್, ಧನು ವಿರುದ್ಧ ಉಗ್ರವತಾರ ತಾಳಿದ್ದಾರೆ. ಬಿಗ್‌ಬಾಸ್ ಮಹಾ ಆಟದಲ್ಲಿ ಜಂಟಿ ಹಾಗೂ ಒಂಟಿ ಎಂಬ 2 ತಂಡಗಳನ್ನು ರಚಿಸಿರುವುದು ಗೊತ್ತೇ ಇದೆ. ಎರಡೂ ತಂಡಗಳ ಮಧ್ಯೆ ಕಾಲ ಕಾಲಕ್ಕೆ ಟಾಸ್ಕ್ ನಡೆಯುತ್ತದೆ. ಈಗ 3ನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್ ಆಯ್ಕೆ ಮಾಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಉಸ್ತುವಾರಿ ಆಗಿದ್ದರು. ಆದ್ರೆ ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ ಕಲ್ಲೋಲ ಆಗಿದೆ. ಟಾಸ್ಕ್ ನಡೆಯುವ ವೇಳೆ ಉಸ್ತುವಾರಿಗಳು ಸರಿಯಾಗಿ ನಿಯಮವನ್ನು ಅರ್ಥಮಾಡಿಕೊಳ್ಳದೇ ಎಡವಟ್ಟು ಮಾಡಿದ್ದಾರೆ. ಧನುಷ್ ವಿನ್ನರ್ ಎಂದು ಘೋಷಿಸಿಬಿಟ್ಟಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಪ್ರಶ್ನೆ ಮಾಡಿದರು. ಆ ಬಳಿಕ ಉಸ್ತುವಾರಿಗಳು ಗೊಂದಲಕ್ಕೆ ಸಿಲುಕಿದರು. ನಿಯಮ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿತ್ತು. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಎಲ್ಲರೂ ಕಂಗಾಲಾದರು. ಆಗ ಧನುಷ್ ಹಾಗೂ ಸುಧಿ ಮಧ್ಯೆ ಕಿರಿಕ್ ಆಗಿದೆ.
ಸುಧಿ ಅವರು ತಮಗೆ ಆಟದಲ್ಲಿ ಮತ್ತೆ ಅವಕಾಶ ನೀಡಬೇಕು ಎಂದು ವಾದಿಸಿದ್ದಾರೆ. ಆದರೆ, ಉಸ್ತುವಾರಿಗಳು ಇದಕ್ಕೆ ಸಿದ್ಧರಿಲ್ಲ. ಅತ್ತ ಧನುಷ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದರು. ಸುಧಿಗೆ ಮತ್ತೆ ಅವಕಾಶ ನೀಡಿದರೆ ನನಗೆ ಮೋಸ ಆಗುತ್ತದೆ ಎಂದು ವಾದ ಮುಂದಿಟ್ಟರು. ಇದರ ಮಧ್ಯೆ ಚಂದ್ರಪ್ರಭ ಕೂಡ ಈ ಜಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧನುಷ್ ಬಿಟ್ಟು ಉಳಿದ 3 ಜನ ಈ ಟಾಸ್ಕ್ ಆಡೋಕ್ಕೆ ಆಗುತ್ತಾ ಕೇಳಿ ಎಂದು ಸುಧಿ ಉಸ್ತುವಾರಿ ಬಳಿ ಹೇಳಿದ್ದಾರೆ. ಆದರೆ, ಇದಕ್ಕೆ ಉಸ್ತುವಾರಿಗಳು ಒಪ್ಪಲಿಲ್ಲ. ಇದರಿಂದ ಸುಧಿ ಕೋಪಗೊಂಡಿದ್ದಾರೆ. ಇದಕ್ಕೆಲ್ಲ ಮೇನ್ ಕಾರಣ ಧನು. ಸುಮ್ನೆ ಕಿರುಚಿಕೊಳ್ಳುತ್ತ ಇದ್ದೀರಿ ಓ ಅಂತ.. ಆಗಲ್ಲ ಅಂದ್ರೆ ಹೇಳಿ.. ನಮ್ಗೆ ಕೇಳಿಸ್ತಾ ಇಲ್ಲ ಬಿಗ್ ಬಾಸ್.. ನಮ್ಗೆ ಕೆಲ್ಸ ಗೊತ್ತಿಲ್ಲ.. ಸೈಡ್ನಲ್ಲಿ ನಿತ್ಕೊಂಡು ನೋಡ್ತಾ ಇರ್ತೀವಿ ಅಂತ ಹೇಳಿ ಎಂದು ಸುಧಿ ಸಿಟ್ಟಾಗಿದ್ದಾರೆ. ಎಸ್ಎಸ್ಎಲ್ಸಿ ಆದ ತಕ್ಷಣ ಯುನಿಫಾರ್ಮ್ ಬಿಚ್ಚಿಟ್ಟು ಕಲರ್ ಡ್ರೆಸ್ ಹಾಕ್ಕೊಂಡು ಬಂದುಬಿಡೋದು ಅಲ್ಲ ಎಂದು ಹೇಳಿದ್ದಾರೆ. ಅತ್ತ ಚಂದ್ರಪ್ರಭ ಕೂಡ ಧನುಷ್ ಮೇಲೆ ಕೋಪಗೊಂಡು, ಅವರಿಗೆ ಅವರೇ ಹೀರೋ ಅಂತ ಅಂದುಕೊಂಡಿದ್ದಾರೆ.. ನಾವೆಲ್ಲ ಹಾಗಿದ್ರೆ ಇಲ್ಲಿ ಏಕೆ ಬಂದಿದ್ದೇವೆ ಎಂದಿದ್ದಾರೆ. ಅಲ್ಲದೆ ಇಬ್ಬರೂ ಕೈ-ಕೈ ತೋರಿಸಿಕೊಂಡು ಮಾತನಾಡಿದ್ದು, ಆಟದ ರದ್ದಿನಿಂದ ದೊಡ್ಮನೆ ಬಿಸಿ ಏರಿದೆ.

