Site icon BosstvKannada

ಮನ್ರೇಗಾ ಯೋಜನೆ ಪುನರ್‌ ಸ್ಥಾಪನೆ ಮಾಡುವವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು, ಜ.27: ಕೇಂದ್ರ ಸರ್ಕಾರ ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಎಂಬ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಲ್ಲಿ ರಾಮ ಎಂಬುದು ಕೇವಲ ಹೆಸರಷ್ಟೇ, ಬಡವರ ಹಿತದ ಬಗ್ಗೆ ಯಾವುದೇ ಚಿಂತನೆ ಇಲ್ಲ. ದಶರಥ ರಾಮ, ಕೌಸಲ್ಯ ರಾಮ ಅಥವಾ ಸೀತಾರಾಮ ಯಾರೂ ಈ ಕಾಯ್ದೆಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಯ್ದೆ ಜಾರಿಗೊಂಡಿತ್ತು‌. ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರ ಬಗ್ಗೆ ಕಾಂಗ್ರೆಸ್ ಮಾತ್ರ ಚಿಂತನೆ ಮಾಡುತ್ತದೆ. ಬಿಜೆಪಿ ಎಲ್ಲಾ ಕಾರ್ಯಕ್ರಮ ನಾಶ ಮಾಡಿ ಉದ್ಯೋಗ ಸಿಗದಂತೆ ಮಾಡಿದ್ದಾರೆ. ಬಡವರಿಗೆ ಹಣಕಾಸು ಸಿಗಬಾರದು, ಅವರು ಸೇವಕರಾಗಿ ಇರಬೇಕು ಎಂಬ ಉದ್ದೇಶದಿಂದ ಆರ್‌ಎಸ್ಎಸ್ ಮಾರ್ಗದರ್ಶನ ಮಾಡಿ ಕಾಯ್ದೆ ರದ್ದು ಮಾಡಲಾಗಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಮನರೇಗಾದಲ್ಲಿ ಉದ್ಯೋಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೀರ್ಮಾನ ಆಗುತ್ತಿತ್ತು. ಆದರೆ, ಜಿ ರಾಮ್ ಜಿ ಯಲ್ಲಿ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ನೀವು ಉದ್ದೇಶಿಸಿದ ಕಡೆ ಕೆಲಸ ಸಿಗಲ್ಲ ಎಂದು ಪ್ರತಿಭಟನೆಯಲ್ಲಿ ವಿವರಿಸಿದರು.

ಮನ್ರೇಗಾದಿಂದ ಒಂದು ಪಂಚಾಯತಿಗೆ ಒಂದು ಕೋಟಿ ಸಿಗ್ತಾ ಇತ್ತು. ಆದರೆ ಇನ್ಮುಂದೆ ಸಿಗುವುದಿಲ್ಲ. ಕಾಯ್ದೆ ಜಾರಿಗೆ 40% ರಾಜ್ಯ ಸರ್ಕಾರ ಹಾಗೂ ಕೇಂದ್ರ 60% ಅನುದಾನ ನೀಡಬೇಕಾಗಿದೆ. ಕೇಂದ್ರದ ನೀತಿಯಿಂದಾಗಿ ಅನೇಕ ರಾಜ್ಯಗಳು ಕಷ್ಟದಲ್ಲಿವೆ. ಹೀಗಾಗಿ ಇಡೀ ದೇಶದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ವಿಬಿ ಜಿ ರಾವ್ ಜಿ ರದ್ದು ಮಾಡಿ ಮನರೇಗಾ ಪುನರ್‌ ಸ್ಥಾಪನೆ ಮಾಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದರ ಹಿಂದೆ ಆರ್‌ಎಸ್‌ಎಸ್‌ ಇದೆ, ಬಡವರು ಶಕ್ತಿಯುತವಾಗಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಸಮಾಜದಲ್ಲಿ ಅಸಮಾನತೆ ಇರಬೇಕು ಎಂಬುದು ಆರ್‌ಎಸ್‌ಎಸ್‌ ಹುನ್ನಾರವಾಗಿದೆ ಎಂದು ಕಿಡಿಕಾರಿದರು.

ಮಹಾತ್ಮಾ ಗಾಂಧಿಯನ್ನು ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಹತ್ಯೆ ಮಾಡಿದೆ. ಇನ್ನು ನಾವು ಬಿಡಬೇಕಾ? ಬಿಜೆಪಿ ಪ್ರತಿದಿನ ಸುಳ್ಳು ಹೇಳುತ್ತಿದೆಭಟನೆ ನಿಲ್ಲುವುದಿಲ್ಲ ಎಂದರು.

Exit mobile version