Site icon BosstvKannada

ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ : ಯತ್ನಾಳ್ ಲೇವಡಿ

ಕಾಂಗ್ರೆಸ್‌ನವರಿಗೆ ಧರ್ಮಸ್ಥಳ ಚಲೋ ಮಾಡುವ ಬುದ್ಧಿ ಬಂದಿರೋದು ಒಳ್ಳೆಯದು. ಇದುವರೆಗೆ ಮಸೀದಿ, ದರ್ಗಾಗೆ ಹೋಗ್ತಿದ್ರು. ಈಗ ಧರ್ಮಸ್ಥಳಕ್ಕೆ ಹೋಗ್ತಿರೋದು ಸ್ವಾಗತ. ಸಿದ್ದರಾಮಯ್ಯ ಕೂಡಾ ಹೋಗಲಿ, ಡಿಕೆಶಿ ಸಹ ಹೋಗಲಿ. ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಧರ್ಮಸ್ಥಳ ಯಾತ್ರೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನವರಿಗೆ ಧರ್ಮಸ್ಥಳ ಚಲೋ ಮಾಡುವ ಬುದ್ಧಿ ಬಂದಿರೋದು ಒಳ್ಳೆಯದು. ಇದುವರೆಗೆ ಮಸೀದಿ, ದರ್ಗಾಗೆ ಹೋಗ್ತಿದ್ರು. ಈಗ ಧರ್ಮಸ್ಥಳಕ್ಕೆ ಹೋಗ್ತಿರೋದು ಸ್ವಾಗತ. ಸಿದ್ದರಾಮಯ್ಯ ಕೂಡಾ ಹೋಗಲಿ, ಡಿಕೆಶಿ ಸಹ ಹೋಗಲಿ. ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ಸಿಎಂ ಸಿದ್ದುಗೆ ಟಾಂಗ್‌ ಕೊಟ್ಟಿದ್ದಾರೆ.

ಅಲ್ಲದೇ ದಸರಾ ವಿವಾದ ಕುರಿತು ಮಾತನಾಡಿ, ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದು ತಿಳಿಸಿದ್ದಾರೆ.

Read Also : ದೀಪಾವಳಿಗೆ ಡಬಲ್‌ ಧಮಾಕಾ.. ಜಿಎಸ್‌ಟಿಯಲ್ಲಿ ಕ್ರಾಂತಿಕಾರಿ ಬದಲಾವಣೆ

Exit mobile version