Site icon BosstvKannada

ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ : ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಇಂದು ದೇಶದಾದ್ಯಂತ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ಗಾಂಧಿ ಟೋಪಿ ಧರಿಸಿ ಬಂದಿರುವ ಸಿಎಂ ಸಿದ್ದರಾಮಯ್ಯ ತೆರದ ಜೀಪ್ ನಲ್ಲಿ ಗೌರವ ರಕ್ಷೆ ಸ್ವೀಕರಿಸಿದ್ರು. ಮಾಣಿಕ್ ಷಾ ಪೆರೆಡ್ ಗ್ರೌಂಡ್​​ನಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆದಿದೆ. ಈ ಬಾರೀ ಮಳೆ ಬಂದ್ರೂ ನೆನೆಯದಂತೆ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಾಣಿಕ್ ಷಾ ಸುತ್ತಲೂ 300 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಬಿಗಿಭದ್ರತೆ ಏರ್ಪಡಿಸಲಾಗಿದೆ.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಿಎಂ ಪರೇಡ್​ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಪಾಸ್ ಹೊಂದಿರುವವರಿಗೆ ನಿಗದಿಪಡಿಸಿದ ಗೇಟ್ ಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಪಿಂಕ್ ಪಾಸ್ ಇರೋರು ಗೇಟ್ 2 ರಿಂದ ಪ್ರವೇಶಪಡೆಯಬೇಕು. ವೈಟ್ ಪಾಸ್ ಇರುವವರು, ಮಾಧ್ಯಮದವರು ಗೇಟ್ 4 ರಿಂದ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

Read Also : 79ನೇ ಸ್ವಾತಂತ್ರ್ಯೋತ್ಸವ : ಗಾಂಧಿ ಟೋಪಿಯಲ್ಲಿ ಮಿಂಚಿದ ಸಿಎಂ, ಡಿಸಿಎಂ.. ಇತಿಹಾಸ ಮೆಲುಕು ಹಾಕಿದ ಸಿದ್ದರಾಮಯ್ಯ

Exit mobile version