BosstvKannada

Chitradurga Wedding Incident : 2ನೇ ಮದ್ವೆಯಾಗ್ತಿದ್ದ ಗಂಡನಿಗೆ ಹೆಂಡ್ತಿಯಿಂದ ಮಂಟಪದಲ್ಲೇ ಗೂಸಾ..!

ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮವೇ ಸೃಷ್ಟಿಯಾಗಿದೆ. 2ನೇ ಮದುವೆಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮಂಟಪದಲ್ಲೇ (Chitradurga Wedding Incident)ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಡೆದಿದೆ.

4 ವರ್ಷದ ಹಿಂದೆ ತನುಜಾ ಎಂಬಾಕೆಯನ್ನ ಆರೋಪಿ ಕಾರ್ತಿಕ್ ಮದುವೆಯಾಗಿದ್ದ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ‌ ತನುಜಾ, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್​ನನ್ನು ಕೈಹಿಡಿದಿದ್ದಳು. ಹೀಗಿದ್ದೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ.

ವರದಕ್ಷಿಣೆ ಆಸೆಗೆ ಮತ್ತೊಮ್ಮೆ‌ ಹಸಣೆ ಏರಲು ಸಿದ್ಧವಾಗಿದ್ದ ಎಂದು ಹೇಳಲಾಗಿದೆ. ಈ ವಿಚಾರ ಹೇಗೋ ಮೊದಲ ಪತ್ನಿಯ ಕಿವಿಗೆ ಬಿದ್ದಿದೆ. ಸುದ್ದಿ ತಿಳಿದು ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಧರ್ಮದೇಟು ಕೊಟ್ಟಿದ್ದಾಳೆ. ಆ ಮೂಲಕ ಕಾರ್ತಿಕ್​ ಪತ್ನಿ ತನುಜಾ ಕುಟುಂಬಸ್ಥರಿಂದ‌ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version