Site icon BosstvKannada

Chinnaswamy Stampede : ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ : ಸಚಿವ ಸೋಮಣ್ಣ

ಕಾಲ್ತುಳಿತ ಪ್ರಕರಣಕ್ಕೆಸಂಬಂಧಿಸಿದಂತೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 11 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು ಸಿದ್ದರಾಮಯ್ಯ ಸರ್ಕಾರ ಪಾಪಕ್ಕೆ ಗುರಿಯಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರನ್ನು ಪ್ರಾಮಾಣಿಕ ಅಧಿಕಾರಿ ಅವರನ್ನು ಅಮಾನತು ಮಾಡಲಾಗಿದೆ. ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ನಿಮ್ಮ ರಾಜಕೀಯದ ಲಾಭಕ್ಕಾಗಿ ಇಂತಹ ದುರ್ಘಟನೆಗೆ ಜನರನ್ನು ಬಲಿಕೊಡುತ್ತಿದ್ದೀರಿ” ಎಂದು ಕಠಿಣ ಟೀಕೆ ಮಾಡಿದ್ದಾರೆ.

ಸೋಮಣ್ಣ ಈ ಸರ್ಕಾರವನ್ನು “ಶಾಪಗ್ರಸ್ತ ಸರ್ಕಾರ” ಎಂದು ಕರೆಯುತ್ತಾ, “ನೀವು ಮುಗ್ಧ ಜನರನ್ನು ಸಾಯಿಸಿ ಶಾಪ ಪಡೆಯುತ್ತಿದ್ದೀರಿ. ಇನ್ನು ಮುಂದೆ ಅಧಿಕಾರಿಗಳು ನಿಮ್ಮೊಂದಿಗೆ ಕೆಲಸ ಮಾಡಲು ಹೆದರುತ್ತಾರೆ. ಕಾರಣ, ನೀವು ಒಳ್ಳೆಯ ಅಧಿಕಾರಿಗಳನ್ನು ಅಮಾನತು ಮಾಡುವ ಕಾರ್ಯ ಮಾಡುತ್ತಿದ್ದೀರಿ. ಇದೊಂದು ಅಕ್ಷಮ್ಯ ಅಪರಾಧ. ಜನತೆ ಈ ದುಃಖವನ್ನು ಮರೆಯಲಾರರು” ಎಂದು ಹೇಳಿದರು.

ನಿಮಗೆ ಮಾನ ಮರ್ಯಾದೆ ಇದ್ದರೆ ಇದರ ಹೊಣೆ ಹೊರಬೇಕು. ಇಂತಹ ಘಟನೆ ಮಾಡಿ ಇತಿಹಾಸದಲ್ಲಿ ನೀವು ಉಳಿದುಕೊಂಡಿದ್ದೀರಿ. ಈಗ ಕಣ್ಣು ಒರೆಸೋ ತಂತ್ರ ಮಾಡ್ತಿದ್ದೀರಾ. ಸರ್ಕಾರಕ್ಕೆ ಹೆಸರು ಮಾಡೋ ಆತುರದ ಪರಮಾವಧಿ. ಇದಕ್ಕೆ ನಿಮಗೆ ಕೊಡಲಿ ಪೆಟ್ಟಾಗಿದೆ. ಈ ಘಟನೆ ಅಕ್ಷಮ್ಯ ಅಪರಾಧ. ಇದಕ್ಕೆ ನೀವೆ ಬೆಲೆ ತೆರಬೇಕು ಎಂದು ಸರ್ಕಾರದ ವಿರುದ್ಧ ಗುಡುಗಿದರು.

Exit mobile version