ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ( Chinnaswamy stampede ) 11 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಾಲ್ತುಳಿತದ ಸಂಪೂರ್ಣ ವರದಿ ನೀಡುವಂತೆ ನೋಟಿಸ್‌ ನೀಡಿತ್ತು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್‌ ವಿಚಾರಣೆ ನಡೆಸಿದೆ.

ಸರ್ಕಾರದ ಪರವಾಗಿ ಹೈಕೋರ್ಟ್‌ಗೆ ಹಾಜರಾಗಿದ್ದ ಕೆ.ಸಿ ಜನರಲ್‌ ಶಶಿ ಕಿರಣ್‌ ಶೆಟ್ಟಿ ಅವರಿಗೆ ಘಟನೆಗೆ ಉತ್ತರಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ವಿಚಾರಣೆ ವೇಳೆ, ನೀವು ನಾವು ಕೇಳಿದ ವರದಿ ಸಲ್ಲಿಸುತ್ತಿಲ್ಲವೇ..? ವರದಿ ಸಲ್ಲಿಕೆಗೆ ಏನ್ ಕಷ್ಟ ಇದೆ ಅಂತಾ ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಿಜೆ ಕಾಮೇಶ್ವರ್ ರಾವ್ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಅಡ್ವೋಕೇಟ್‌ ಜನರಲ್‌ ಶಶಿ ಕಿರಣ್‌ ಶೆಟ್ಟಿ , ತಮ್ಮ ಉತ್ತರವನ್ನ ಕೋರ್ಟ್‌ಗೆ ಇನ್ನೂ ಉತ್ತರಿಸಿಲ್ಲ. ನ್ಯಾಯಾಂಗ ತನಿಖೆಗೆ ಆಯೋಗವನ್ನ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ವರದಿ ನೀಡಲು ಒಂದು ತಿಂಗಳ ಕಾಲಾವಕಾಶ ಬೇಕು. ಕೋರ್ಟ್ ನೀಡುವ ಯಾವುದೇ ನಿರ್ದೇಶನ ಪಾಲಿಸಲು ಸರ್ಕಾರ ಸಿದ್ದವಾಗಿದೆ. ಸದ್ಯ
ಕೆಲ ಆರೋಪಿಗಳನ್ನ ಬಂಧಿಸಿ‌ ತನಿಖೆ ನಡೆಸಲಾಗುತ್ತಿದೆ. ಜ್ಯೂಡಿಷಿಯಲ್ ಎನ್‌ಕ್ವೈರಿ ನಡೀತಾ ಇದೆ. ಜಿಲ್ಲಾಧಿಕಾರಿ ತನಿಖೆ ನಡೀತಾ ಇದೆ. ಜೂನ್ 16 ರವರೆಗೆ ಕಾಲಾವಕಾಶ ನೀಡಲು ಎಜಿ ವಾದಿಸಿ ಮನವಿ ಮಾಡಿದ್ರು.

ವರದಿ ಸಲ್ಲಿಕೆ ಎರಡು ದಿನ ಮಾತ್ರ ಅವಕಾಶ ನೀಡಲಾಗುವುದು.. ಅದಕ್ಕಿಂತ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ ಅಂತಾ ಜಡ್ಜ್ ಆದೇಶಿಸಿದ್ದಾರೆ. ಜೂನ್ 12 ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿ ಎಂದು ಆದೇಶಿಸಿ, ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ..

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಹೈಕೋರ್ಟ್‌ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿತ್ತು. ಕೆಎಸ್‌ಸಿಎ, ಆರ್‌ಸಿಬಿ ಫ್ಯ್ರಾಂಚೈಸಿ ಮ್ಯಾನೆಜ್‌ಮೆಂಟ್‌, ಡಿಎನ್‌ಎ ಮ್ಯಾನೆಜ್‌ಮೆಂಟ್‌ ಹಾಗೂ ರಾಜ್ಯಸರ್ಕಾರದ ವಿರುದ್ಧ ಹೈಕೋರ್ಟ್‌ ಸ್ವಯಂ ದೂರು ದಾಖಲಿಸಿತ್ತು..

Share.
Leave A Reply