Site icon BosstvKannada

Chinnaswamy Stampede : ಫೇಲ್ಯೂರ್ ಆಗಿರೋದಂತೂ ನಿಜ, ಕಾಲ್ತುಳಿತದ ಬಗ್ಗೆ ಸಚಿವ ಜಾರಕಿಹೊಳಿ ರಿಯಾಕ್ಷನ್

ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stampede) ಬಳಿ ನಡೆದ ಘಟನೆ ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ.. ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಫೇಲ್ಯೂರ್ ಆಗಿರೋದಂತೂ ನಿಜ. ಅದಕ್ಕೆ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಹಿಂದೆಯೂ ಸಾಕಷ್ಟು ಘಟನೆಗಳಾಗಿವೆ ಆದ್ರೆ, ಯಾರೂ ಕೂಡಾ ರಾಜೀನಾಮೆ ಕೊಟ್ಟಿಲ್ಲ ಎಂದರು.

ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಮೊದಲೇ ತುಂಬಾ ಕನ್ಫ್ಯೂಷನ್ ಇದೆ. ಕಮಿಷನರ್ ಲೆವೆಲ್‌ನಲ್ಲಿ ಒಂದಾಗಿದೆ, ಡಿಸಿಪಿ ಲೆವೆಲ್ನಲ್ಲಿ ಒಂದಾಗಿದೆ. ಇನ್ಸ್ಪೆಕ್ಟರ್ ಒಂದು ಪತ್ರ ಬರೆದಿದ್ದಾರೆ, ಪೊಲೀಸರು ಒಂದು ಪತ್ರ ಬರೆದಿದ್ದಾರೆ. ಎಲ್ಲವೂ ನಾನು ಹೇಳಿದ ತಕ್ಷಣ ಆಗಲ್ಲ, ವರದಿ ಬರಲಿ ಎಂದರು.

ಪರ್ಮಿಷನ್ ಕೊಟ್ಟಿದ್ದು ವಿಧಾನ ಸೌಧದ ಒಳಗೆ ಕಾರ್ಯಕ್ರಮ ಮಾಡಲಿಕ್ಕೆ, ಸಮಸ್ಯೆ ಆಗಿರೋದು ಸ್ಟೇಡಿಯಂ ಹೊರಗೆ. ನಮ್ಮಲ್ಲಿ ಪರ್ಮಿಷನ್ ಕೊಟ್ರು ಕಾರ್ಯಕ್ರಮ ಮುಗಿದೋಯ್ತು, ಕಾರ್ಯಕ್ರಮ ಮುಗಿದ ಮೇಲೆ ಸ್ಟೇಡಿಯಂ ಬಳಿ ಘಟನೆಯಾಗಿದೆ, ಅಲ್ಲಿ ತನಿಖೆಯಾಗ್ಬೇಕು. ಈ ಸಂಬಂಧ ವರದಿ ಕೇಳಿರಬಹುದು ಈ ಬಗ್ಗೆ ಹೈ ಕಮಾಂಡ್‌ಗೂ ಜವಾಬ್ದಾರಿ ಇದೆ. ಮುಂದೆ ಈ ರೀತಿ ಆಗದಂತೆ ಸಲಹೆ ನೀಡಬಹುದು ಎಂದರು.

Exit mobile version