Cannes ರೆಡ್‌ಕಾರ್ಪೆಟ್‌ನಲ್ಲಿ ಪ್ರತಿವರ್ಷ ಭಾಗಿಯಾಗೋ ಐಶ್ವರ್ಯಾ ರೈ ಈ ಬಾರಿಯೂ ಕೊನೆಗೂ ಎಂಟ್ರಿ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯರನ್ನ ನೋಡಲು ಕಾತುರದಿಂದ ಕಾಯ್ತಿದ್ದ ಫ್ಯಾನ್ಸ್‌ಗೆ ನಟಿ ನಿರಾಸೆಗೊಳಿಸಿಲ್ಲ. ಇನ್ನು ಅವರು ರೆಡ್ ಕಾರ್ಪೆಟ್ ಲುಕ್‌ಗೆ ಫ್ಯಾನ್ಸ್ ಫುಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ದಕ್ಷಿಣ ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ನಡೆದ 78 ನೇ ಕ್ಯಾನೆಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು, ನೋಡುಗರನ್ನ ಬೆರಗುಗೊಳಿಸಿ ದ್ದಾರೆ. ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯ ರೈ ಭಿನ್ನ ವಿಭಿನ್ನ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಆದ್ರೆ ಈ ಬಾರಿ ಐಶ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಭಾರತದ ಸಂಪ್ರದಾಯದಂತೆ ಸೀರೆಯುಟ್ಟು, ಹಣೆಗೆ ಸಿಂಧೂರ ಇಟ್ಟುಕೊಂಡು ಚಿತ್ರೋತ್ಸವದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಜ್ಯುವೆಲ್ಲರಿಗಳನ್ನು ಧರಿಸಿ ಸಖತ್ ಮಿಂಚಿದ್ದಾರೆ. ಈ ಮೂಲಕ ಭಾರತದ ಆಪರೇಷನ್ ಸಿಂಧೂರಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
Also Read: ಯಜಮಾನಿಯರಿಂದ “ಗೃಹಲಕ್ಷ್ಮೀ ಸಂಘ” ಗಳ ರಚನೆಗೆ ಕಾರ್ಯಯೋಜನೆ: ಸಚಿವೆ Lakshmi Hebbalkar
ಅಲ್ದೇ ಬಹುದಿನಗಳಿಂದ ಹರದಾಡ್ತಿರೋ ವದಂತಿಗಳಿಗೂ ತೆರೆ ಎಳೆದಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ರಿಂದ ಐಶ್ವರ್ಯ ರೈ ದೂರ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಿಂಧೂರ ಇಟ್ಟುಕೊಂಡು ಚಿತ್ರೋತ್ಸವದಲ್ಲಿ ಭಾಗವಹಿಸುವ ಮೂಲಕ ಡಿವೋರ್ಸ್ ವದಂತಿಯನ್ನು ದೂರ ತಳ್ಳಿದ್ದಾರೆ. ಇದೀಗ ಐಶ್ವರ್ಯ ರೈ ಅವರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.