Site icon BosstvKannada

ಗ್ರಾಹಕರಿಗೆ ಬಂಪರ್‌ ಸುದ್ದಿ : ನಂದಿನಿ ಉತ್ಪನ್ನಗಳ ದರದಲ್ಲಿ ಭರ್ಜರಿ ಇಳಿಕೆ

ಕೆಲದಿನಗಳ ಹಿಂದೆ ಕೇಂದ್ರ ವಿತ್ತ ಸಚಿವೆ ನಿರ್ಮಲಸೀತಾರಾಮನ್‌ ದೇಶದ ಜನತೆಗೆ ಹೊಸ GST ಜಾರಿಯಾಗುವ ಬಗ್ಗೆ ಚಾರ್ಟ್‌ ಬಿಡುಗಡೆ ಮಾಡಿದ್ದರು. ಈ ಹಿನ್ನಲೆ ಅನೇಕ ವಸ್ತಗಳು, ಉತ್ಪನ್ನಗಳ ಮೇಲಿನ GST ದರ ಕಡಿಮೆ ಮಾಡಲಾಗಿತ್ತು ಇದರಿಂದಾಗಿ ಕರ್ನಾಟಕದಲ್ಲು ದರ ಏರಿಕೆಯ ಬಿಸಿಗೆ ಸಿಲುಕಿದ್ದರ ಗ್ರಾಹಕರು ಈಗ ನಂದಿನಿ ಮೊಸರಿನ ಮೇಲಿನ ದರದಲ್ಲಿ ಇಳಿಕೆಯಾಗುವ ವಿಷಯ ತಿಳಿದು ಸಂತಸ ಪಟ್ಟಿದ್ದಾರೆ. ನಂದಿನಿ ಉತ್ಪನ್ನ ಬಳಸುವ ಗ್ರಾಹಕರಿಗೆ ಇಲ್ಲಿದೆ ಗುಡ್‌ ನ್ಯೂಸ್.‌ ಕೆಲ ತಿಂಗಳ ಹಿಂದೆ ನಂದಿನಿ ಹಾಲು ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಇದೀಗ ಗ್ರಾಹಕರಿಗೆ ಕೆಎಂಎಫ್‌ ಸಂಸ್ಥೆ ಸಿಹಿ ಸುದ್ದಿ ಕೊಟ್ಟಿದ್ದು, ಒಂದು ಲೀಟರ್‌ ಮೊಸರಿನ ಬೆಲೆ ನಾಲ್ಕು ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ. ಆಹಾರ ಉತ್ಪನ್ನಗಳ ಮೇಲಿನ GSTಯನ್ನ ಶೇ 12 ರಿಂದ 5ಕ್ಕೆ ಇಳಿಕೆ ಮಾಡುವ ‌ಸಾಧ್ಯತೆ ಇದೆ. ಹೀಗಾಗಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ‘ನಂದಿನಿ’ಯ ವಿವಿಧ ಉತ್ಪನ್ನಗಳ ದರ ಇಳಿಕೆಯಾಗುತ್ತೆ ಎನ್ನಲಾಗ್ತಿದೆ. ಸೆ.22ರಿಂದಲೇ ನಂದಿನಿ ಉತ್ಪನ್ನಗಳ ದರ ಶೇ 7ರಷ್ಟು ಕಡಿಮೆಯಾಗಲಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾಹಿತಿ ನೀಡಿದ್ದು, ಇಂದು ಅಧಿಕಾರಿಗಳ ಜೊತೆ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತೆ. 2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದ್ರಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆಯಾಗಿದೆ.

Read Also : ಬೊಜ್ಜು ಕರಗಿಸಲು ಇಲ್ಲಿದೆ ಬೆಸ್ಟ್‌ ಪ್ಲ್ಯಾನ್‌ : ಗ್ರೀನ್‌ ಟೀ ಕುಡಿಯುವ ಮುಂಚೆ ಇದನ್ನು ಪಾಲಿಸಿ

Exit mobile version