Site icon BosstvKannada

BSF Jawan, Returns To India : ಭಾರತಕ್ಕೆ ಪಾಕ್‌ನಿಂದ ಯೋಧ ಹಸ್ತಾಂತರ..!

ಪಾಪಿ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಂದು ರಾಜತಾಂತ್ರಿಕ ಗೆಲುವು ಸಾಧಿಸಿದೆ. ಈಗಾಗಲೇ ಯುದ್ಧ ಮಾಡಿ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದ್ದ ಭಾರತ ಮತ್ತೊಮ್ಮೆ ತನ್ನ ಪರಾಕ್ರಮವನ್ನು ಸಾಬೀತು ಮಾಡಿದೆ. ಕೆಲ ದಿನಗಳ ಹಿಂದೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಕಸ್ಮಾತ್‌ ಆಗಿ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF Jawan ಪಾಕಿಸ್ತಾನ ವಶಕ್ಕೆ ಪಡೆದಿತ್ತು.

ಇದಾದ ಬಳಿಕ ಈ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿ ಆ ಯೋಧನ ಭವಿಷ್ಯದ ಬಗ್ಗೆ ಆತಂಕ ಮೂಡಿತ್ತು. ಆದ್ರೆ ಈಗ ಪಾಕಿಸ್ತಾನ ಭಾರತದ BSF ಯೋಧ ಪೂರ್ಣಂ ಕುಮಾರ್‌ನನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್ 23 ರಂದು ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನ ರೇಂಜರ್ಸ್ ವಶಕ್ಕೆ ಪಡೆದಿದ್ದ ಗಡಿ ಭದ್ರತಾ ಪಡೆ ಜವಾನ ಪೂರ್ಣಮ್ ಕುಮಾರ್ ಶಾ ಇಂದು ಭಾರತಕ್ಕೆ ಮರಳಿದ್ದಾರೆ. ದುಃಖತಪ್ತದಲ್ಲಿದ್ದ ಕುಟುಂಬವು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಳಿಗ್ಗೆ 10.30ರ ಸುಮಾರಿಗೆ ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್ ಮೂಲಕ ಜವಾನನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದ್ರಿಂದ ಭಾರತದ ತಂಟೆಗೆ ಹೋದ್ರೆ ಯಾವ ಪರಿಸ್ಥಿತಿ ಬರುತ್ತೆ ಅಂತ ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ ಅನ್ನೋದು ಪ್ರೂವ್‌ ಆಗಿದೆ. ಸದ್ಯ ಈ ಬಗ್ಗೆ ಗಡಿ ಭದ್ರತಾ ಪಡೆ ಮಾಹಿತಿ ಹಂಚಿಕೊಂಡಿದೆ.

Also Read: Disha ಸಭೆಯಲ್ಲಿ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್‌..!

ಸದ್ಯ ಯೋಧನು ಸ್ವದೇಶಕ್ಕೆ ವಾಪಸ್ ಬಂದ ಸುದ್ದಿ ತಿಳಿಯುತ್ತಿದ್ದಂತೆ ಬಿಎಸ್ಎಫ್ ಜವಾನನ ಕುಟುಂಬವು ಸಂಭ್ರಮದಲ್ಲಿದೆ. ಇನ್ನು ಅವರ ತಂದೆ ಭೋಲನಾಥ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸಿದರು.

Exit mobile version