Site icon BosstvKannada

ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ಸಹೋದರರು

ಕಾರವಾರ: ಸಮುದ್ರದ (Sea) ಅಲೆಗಳಿಗೆ ಸಿಲುಕಿ ಇಬ್ಬರು ಸಹೋದರರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆ ಹೊನ್ನಾವರದ (Honnavar) ಮಂಕಿಯಲ್ಲಿ ನಡೆದಿದೆ. ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಸಮುದ್ರದ ಪಾಲಾದ ಸಹೋದರರು ಎನ್ನಲಾಗಿದೆ. ಇಬ್ಬರೂ ಸಹೋದರರು ಗುರುವಾರ ಸಂಜೆ ಸಮುದ್ರಕ್ಕೆ ಆಟ ಆಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಗುರುವಾರ ತಡರಾತ್ರಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಮಂಕಿ ಪೊಲೀಸರು ಭೇಟಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Exit mobile version