Site icon BosstvKannada

ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ Bro Gowda

Bro Gowda

ಕನ್ನಡ ಬಿಗ್​ಬಾಸ್ ಸೀಸನ್​ 8ರ(Bigg Boss Kannada 8) ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್​ ಖ್ಯಾತಿಯ ಶಮಂತ್ Bro Gowda ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಸಿಂಗಲ್​ ಆಗಿದ್ದ ಶಮಂತ್​ ಬ್ರೋ ಗೌಡ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ಶಮಂತ್​ ಬ್ರೋ ಗೌಡ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು.

Also Read: H.D. Deve Gowda 92ನೇ ಜನ್ಮದಿನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯರಿಂದ ಶುಭಾಶಯ!

ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ Bro Gowda ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಪ್ರದಾಯಬದ್ಧವಾಗಿ ಈ ಜೋಡಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದು, ಬ್ರೋ ಗೌಡ ಹಾಗೂ ಮೇಘನಾಗೆ ಶುಭ ಹಾರೈಸಲು ಸ್ಟಾರ್ ನಟ ನಟಿಯರು ಆಗಮಿಸಿದ್ರು.

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ (Bigg Boss Kannada 8) ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ ಶಮಂತ್ Bro Gowda (shamanth bro gowda), ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚಿದ್ದರು. ಅಷ್ಟೇಅಲ್ಲಾ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾಗಿದೆ. ಹೊಸ ಕನ್ನಡ ಸಿನಿಮಾವೊಂದರಲ್ಲಿ ಶಮಂತ್ ಹೀರೋ ಆಗಿದ್ದು, ‘ರಾಘು’, ‘ಶೆಫ್ ಚಿದಂಬರ’ ಸಿನಿಮಾಗಳ ನಿರ್ದೇಶಕ ಎಂ ಆನಂದ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.ಇದರ ಬೆನ್ನಲ್ಲೇ ಪ್ರೇಮಿಗಳ ದಿನದಂದೇ ಗುಡ್‌ ನ್ಯೂಸ್‌ (Good News) ಕೊಟ್ಟಿದ್ದರು.ಶಮಂತ್‌ ಅವರು ಮೇಘನಾ ಎಂಬುವರ ಜೊತೆ ಎಂಗೇಜ್‌ ಆಗಿದ್ದರು. ಇದೀಗ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ರೆ

Exit mobile version