Site icon BosstvKannada

ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ದುರಹಂಕಾರ ಜಾಸ್ತಿ, ನಾಲಿಗೆನೂ ಜಾಸ್ತಿ : ಸಿಎಂ ಸಿದ್ದರಾಮಯ್ಯ

ಬಿಜೆಪಿ ಎಮ್‌ಎಲ್‌ಸಿ ರವಿಕುಮಾರ್‌ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆಂದು ಆರೋಪಿಸಿ ಈಗಾಗಲೇ ಕಾಂಗ್ರೆಸ್‌ ಮುಖಂಡರು ದೂರು ದಾಖಲಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೇರಿದಂತೆ, ಮಹಿಳಾ ಸಂಘಟನೆಗಳು ಹಾಗೂ ಕಾಂಗ್ರೆಸ್‌ ನಾಯಕರಿಂದ ಎಮ್‌ಎಲ್‌ಸಿ ರವಿಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.

ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಫಸ್ಟ್‌ ರಿಯಾಕ್ಷನ್‌ ಕೊಟ್ಟಿದ್ದು, ಎಮ್‌ಎಲ್‌ಸಿ ರವಿಕುಮಾರ್‌ ವಿರುದ್ದ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಮ್ಎಲ್‌ಸಿ ರವಿಕುಮಾರ್‌ಗೆ ನಾಲಿಗೆ ಜಾಸ್ತಿಯಾಗಿದೆ. ಅವರಿಗೆ ದುರಂಹಕಾರವೂ ಜಾಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

Exit mobile version