Site icon BosstvKannada

BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್‌

BJP Congress Politics

ಭಾರೀ ಮಳೆಗೆ ಬೆಂಗಳೂರಿನಲ್ಲಿ ಅವಾಂತರಗಳೇ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿರಂತರ (Bengaluru Rain) ಮಳೆಯಾಗುತ್ತಿದೆ. ನೀರು ಹರಿಯಲು ಜಾಗವಿಲ್ಲದೆ ತಗ್ಗು ಪ್ರದೇಶದ ಮನೆಯೊಳಗೆ ನೀರು ನುಗ್ಗುತ್ತಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಬಿಜೆಪಿ ಕಾಂಗ್ರೆಸ್ (BJP Congress Politics) ನಾಯಕರು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿದ್ದಾರೆ.

BJP Congress Politics: ಆದ್ರೆ ಬೆಂಗಳೂರಿನ ಮಳೆ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ಕಡೆಗೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್‌ ತಿರುಗೇಟು ನೀಡಿದ್ದಾರೆ. ಪ್ರಕೃತಿ ಮುನಿದಾಗ ಯಾರು ಏನು ಮಾಡೋಕೆ ಆಗತ್ತೆ ರೀ? ಬಿಜೆಪಿ ಲೂಟರ್ಸ್ ಮಾಡಿದ ಲೂಟಿ ಬಾಕಿ ಕೊಡಲು ಇನ್ನೂ ಮೂರು ವರ್ಷ ಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಬಿಜೆಪಿಯಿಂದ ಡಿಕೆ ಶಿವಕುಮಾರ್ ವಿರುದ್ಧ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ (BJP) ಅವಧಿಯಲ್ಲಿ ಮಳೆ (Rain) ಬಂದಾಗ ಬೆಂಗಳೂರು (Bengaluru) ತೇಲುತ್ತಿತ್ತು. ಬಿಜೆಪಿ ಅವರು ಮರೆತು ಹೋಗಿದ್ದಾರೆ ಅನ್ನಿಸುತ್ತದೆ. ನಮ್ಮ ಸರ್ಕಾರದಲ್ಲಿ ಮಳೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಕೃತಿ ನಡುವೆ ಯಾರು ಏನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಅವಧಿಯಲ್ಲಿ ಲೂಟರ್‌ಗಳು ಏನು ಮಾಡಿದ್ರು ಎಲ್ಲಾ ಬಾಕಿ ಕೊಡಬೇಕಾದರೆ 3 ವರ್ಷ ಬೇಕು. ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ. ಅದನ್ನು ಸರಿ ಮಾಡಬೇಕಾದರೆ ಕಾಲಾವಕಾಶ ಬೇಕಾಗುತ್ತದೆ ಎಂದರು.

ಸಿಎಂ, ಡಿಸಿಎಂ ಅವರು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮುಂದಾಗಿದ್ದಾರೆ. ರಾಜಕಾಲುವೆ ಮೇಲೆ ಮನೆ ಕಟ್ಟಿದ್ದಾರೆ. ಅದಕ್ಕೆ ಯಾವುದೇ ನಿಯಮ ಇಲ್ಲ. ಇದಕ್ಕೆ ಬಿಜೆಪಿ ಕಡಿವಾಣ ಹಾಕಿರಲಿಲ್ಲ. ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕಾನೂನು ಮಾಡಲು ಚಿಂತನೆ ಮಾಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಖಂಡಿತ ಮುಂದಿನ ದಿನಗಳಲ್ಲಿ ಸಿಗಲಿದೆ. ಕಳೆದ ಬಾರಿ ಎಲ್ಲೆಲ್ಲಿ ಸಮಸ್ಯೆ ಆಗಿತ್ತು, ಈಗ ಅದು ಸರಿ ಹೋಗಿದೆ. ಎಲ್ಲಿ ಬಿಜೆಪಿ ಶಾಸಕರು ಸತತವಾಗಿ ಗೆದ್ದು ಬರುತ್ತಿದ್ದಾರೆ ಅಲ್ಲಿ ಏನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಅವರು ಹೇಳಬೇಕು ಎಂದರು.

ಸುಮಾರು 2 ಸಾವಿರ ಕೋಟಿ ರಾಜಕಾಲುವೆ ಸರಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಏನೇ ಮಾಡಬೇಕಾದರೂ ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮಾಡಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಲು ಸಿಎಂ ಅವರು ಮುಂದಿನ 3-4 ವರ್ಷಗಳ ಕಾಲ ಅನುದಾನ ಕೊಡುತ್ತಾರೆ. ಡಿಪಿಆರ್ ರೆಡಿ ಆಗುತ್ತಿದೆ. ಅದೆಲ್ಲ ಆದ ಮೇಲೆ ಬೆಂಗಳೂರಿಗೆ ಹೊಸ ರೂಪ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

Also Read: ಸಿಟಿ ರೌಂಡ್ಸ್‌ಗೆ ಬಂದ CM, ಡಿಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ!

ಈಗ ಏನೇ ಅನಾಹುತ ಆಗುತ್ತಿದ್ದರೂ ಬಿಜೆಪಿ ಅವರು ಸತತವಾಗಿ ಗೆದ್ದು ಬರುತ್ತಿರುವ ಕ್ಷೇತ್ರದಲ್ಲಿ ಅವ್ಯವಸ್ಥೆ ಆಗುತ್ತಿದೆ. ಅದಕ್ಕೆ ಏನು ಕಾರಣ ಎಂದು ಬಿಜೆಪಿ ಅವರು ಹೇಳಲಿ ಎಂದು ಆಗ್ರಹಿಸಿದರು.

Exit mobile version