ಬೆಂಗಳೂರು, ಜ.19: ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. 37 ಕೋಟಿಗೂ ಅಧಿಕ ಮತಗಳನ್ನ ಪಡೆದು ಗಿಲ್ಲಿ ನಟ ಅವರು ಬಿಗ್ ಬಾಸ್ ಕಪ್ ಗೆದ್ದಿದ್ದಾರೆ. ಕಾವ್ಯಾ ಜೊತೆ ಜಂಟಿಯಾಗಿ ದೊಡ್ಮನೆಗೆ ಕಾಲಿಟ್ಟ ಗಿಲ್ಲಿ ಇವತ್ತು ಒಂಟಿಯಾಗಿ ಕಪ್ ಗೆಲ್ಲೋದು ಮಾತ್ರವಲ್ಲದೇ ಕೋಟ್ಯಂತರ ಕನ್ನಡಿಗರ ಮನ ಗೆದ್ದಿದ್ದಾರೆ. ಇದೀಗ ಎಲ್ಲರನ್ನೂ ಕಾಡ್ತಾ ಇರುವ ಪ್ರಶ್ನೆ ಏನಂದ್ರೆ ಗಿಲ್ಲಿ ನಟನಿಗೆ ಎಷ್ಟು ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಅನ್ನೋದು. ಕೇವಲ ಬಿಗ್ ಬಾಸ್ ಕಡೆಯಿಂದ ಮಾತ್ರವಲ್ಲ ಗಿಲ್ಲಿ ಅವರಿಗೆ ಕಿಚ್ಚ ಸುದೀಪ್ ಕೂಡ ಬಹುಮಾನ ನೀಡಿದ್ದಾರೆ.
ಹಾಸ್ಯ ಮಾತ್ರವಲ್ಲದೇ ತನ್ನದೇ ವಿಶಿಷ್ಟ ಮ್ಯಾನರಿಸಂ ಮೂಲಕ ಗಿಲ್ಲಿ ಆಟ ಆಡಿದ್ರು. ಟಾಸ್ಕ್‌ಗಳನ್ನ ಅಷ್ಟಾಗಿ ಆಡದೇ ಇದ್ರೂ ಆಟದ ದಿಕ್ಕನ್ನ ಬದಲಾಯಿಸುವಷ್ಟು ಕೇಪೇಬಲ್ ಆಗಿದ್ರು. ಬಿಗ್ ಬಾಸ್ ಆಟವನ್ನ ಹೀಗೂ ಆಡ್ಬಹುದು ಅಂತಾ ತೋರಿಸಿಕೊಟ್ಟವರು ಗಿಲ್ಲಿನಟ. ಚಿಕ್ಕ ಮಕ್ಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಸ್ಸನ್ನ ಗೆದ್ರು. ಹೀಗಾಗಿ ಇವತ್ತು ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯದ್ದೇ ಹವಾ.

50 ಲಕ್ಷ ರೂಪಾಯಿಯಲ್ಲಿ ಗಿಲ್ಲಿ ಏನ್ ಮಾಡ್ತಾರೆ ಗೊತ್ತಾ? :
ಪ್ರತಿ ಬಾರಿ ವಿನ್ನರ್‌ಗೆ 50 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಕೊಡಲಾಗ್ತಿತ್ತು. ಆದರೆ, ಈ ಬಾರಿ ಗಿಲ್ಲಿಗೆ ಬಂಪರ್ ಹೊಡೆದಿದೆ. ಯಾಕಂದ್ರೆ ಗಿಲ್ಲಿ ಅವರಿಗೆ ಸಿಕ್ಕ ಬಹುಮಾನ ಒಂದೆರಡಲ್ಲ. ಬಿಗ್ ಬಾಸ್ ಕನ್ನಡ 12 ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಹಾಗೆಯೇ ಈ ಬಾರಿಯ ಬಿಗ್ ಬಾಸ್ಗೆ ಮಾರುತಿ ಸುಜುಕಿ ಕೂಡ ಸ್ಪಾನ್ಸರ್ ಆಗಿತ್ತು. ಅವರ ಕಡೆಯಿಂದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಗಿಲ್ಲಿ ನಟನ ಕೈಸೇರಿದೆ.
ಗಿಲ್ಲಿ ಅವರ ತಂದೆ ತಾಯಿ ಸ್ಟೇಜ್ ಮೇಲೆ ಬಂದ ನಂತರ ಸುದೀಪ್ ಕಾರ್ ಕೀ ಚೇನ್ ಕೊಡ್ತಾರೆ. ಈ ಸಂದರ್ಭದಲ್ಲಿ ಗಿಲ್ಲಿ ತಂದೆ ತಾಯಿ ಗಿಲ್ಲಿಯ ಕಷ್ಟದ ದಿನಗಳನ್ನು ನೆನೆದು ಭಾವುಕರಾಗ್ತಾರೆ. ಇನ್ನು, ಪ್ರಾಯೋಜಕರ ಕಡೆಯಿಂದ ಮಾತ್ರವಲ್ಲ ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನದ ಹಣ ಲಭಿಸಿದೆ. ತಮ್ಮ ಅದ್ಭುತ ಆಟದ ಮೂಲಕ ಗಿಲ್ಲಿಯವರು ಕಿಚ್ಚ ಸುದೀಪ್ ಮನ ಗೆದ್ದಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್ ಗಿಲ್ಲಿ ಅದ್ಭುತವಾಗಿ ಆಡಿದ್ದಾರೆ. ಈ ವೇದಿಕೆಯಲ್ಲಿ ನನ್ನ ಕಡೆಯಿಂದ ಗಿಲ್ಲಿಗೆ ನಾನು ಪ್ರೀತಿಯಿಂದ 10 ಲಕ್ಷ ರೂಪಾಯಿ ಕೊಡುತ್ತಿದ್ದೇನೆ ಅಂತ ಹೇಳಿ ಬಿಗ್‌ಬಾಸ್ ಕಪ್ ಅನ್ನು ಗಿಲ್ಲಿ ಕೈಗೆ ಹಸ್ತಾಂತರಿಸಿದರು.
ಇನ್ನು ಬಿಗ್ ಬಾಸ್ ಮನೆಯಿಂದ ಗಿಲ್ಲಿ ನಟ ಹೊರಬಂದ ಬಳಿಕ ಮಾಧ್ಯಮದವರಿಗೆ ಫಸ್ಟ್ ರಿಯಾಕ್ಷನ್ ನೀಡಿದ್ದು, ಈ ವೇಳೆ ಬಿಗ್ ಬಾಸ್‌ನಿಂದ ಕ್ಯಾಶ್ ಪ್ರೈಸ್‌ನಲ್ಲಿ ಏನ್ ಮಾಡ್ತೀರಾ ಅಂತಾ ಕೇಳಿದಾಗ 50 ಲಕ್ಷದಲ್ಲಿ ಯಾವುದಾದರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಅನ್ಕೊಂಡದ್ದೀನಿ ಅಂತಾ ಹೇಳಿದ್ದಾರೆ. ಇನ್ನು ಫಸ್ಟ್ ರನ್ನರ್‌ಅಪ್ ಆಗಿರುವ ರಕ್ಷಿತಾ ಶೆಟ್ಟಿಯವರಿಗೆ ಪ್ರಾಯೋಜಕರ ಕಡೆಯಿಂದ ಇಪ್ಪತ್ತು ಲಕ್ಷ ರೂಪಾಯಿ ಹಾಗೆ ಜಾರ್ ಆಪ್ ಕಡೆಯಿಂದ ಐದು ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ಬಿಗ್ ಬಾಸ್‌ನಲ್ಲಿ 3ನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ ಮೂವರು ಪ್ರಾಯೋಜಕರಿಂದ 7 ಲಕ್ಷ, 2 ಲಕ್ಷ, 5 ಲಕ್ಷದಂತೆ ಒಟ್ಟು 12 ಲಕ್ಷ ರೂ. ನಗದು ಬಹುಮಾನ ಸಿಕ್ಕಿತು.
ಟ್ರೋಫಿ ವಿಶೇಷತೆ ಏನು? :
ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನ ಬಹಳ ವಿಶಿಷ್ಟವಾಗಿ ಸಿದ್ಧ ಮಾಡಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಕನ್ನಡತನ ಮತ್ತು ಹಾಗೂ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿತ್ತರಿಸಲಾಗಿತ್ತು. ಟ್ರೋಫಿಯಲ್ಲೂ ಸೇಮ್ ಟು ಸೇಮ್ ಅದನ್ನೇ ಅಳವಡಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆನೆ, ದರ್ಪಣ ಸುಂದರಿ, ಅರಮನೆ ಇರುವಂತೆ ಟ್ರೋಫಿಯಲ್ಲೂ ಅವನ್ನ ಕೆತ್ತಲಾಗಿದೆ. ಟಾಪ್‌ನಲ್ಲಿ ಬಿಗ್ ಬಾಸ್‌ನ ಕಣ್ಣು ಇಡಲಾಗಿದೆ. ಆ ಕಣ್ಣಿನ ಒಳಗಡೆ ಕನ್ನಡದ ಸಂಖ್ಯೆಗಳನ್ನ ಕ್ಲಾಕ್ ರೀತಿಯಲ್ಲಿ ಕೂರಿಸಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ಡಿಂಡಿಮ ಬಿಗ್ ಬಾಸ್ ಟ್ರೋಫಿ ಮೇಲೆ ಮೇಳೈಸಿದೆ.