Site icon BosstvKannada

bigg boss kannada 11:ಸುಳಿವು ಕೊಟ್ಟ ಕಿಚ್ಚಬಿಗ್‌ಬಾಸ್‌ ವಿನ್ನರ್‌ ಇವ್ರೇ…?

ಫಿನಾಲೆ ಪ್ರವೇಶಿಸುವ ಮೊದಲ ಕಂಟೆಸ್ಟಂಟ್‌ ಯಾರು..?

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ (bigg boss kannada 11) ಹನ್ನೊಂದರ ಫೈನಲ್‌ಗೆ ಕೆಲವೇ ವಾರ ಬಾಕಿ ಇದ್ದು, ಫೈನಲ್‌ಗೆ ಯಾರು ಬರುತ್ತಾರೆ ಎಂಬ ಕುತೂಹಲ ಈಗ ವೀಕ್ಷಕರಿಗೆ ಮನೆ ಮಾಡಿದೆ.. ಅದರ ನಡುವೆ ಓರ್ವ ಸ್ಪರ್ಧಿ ಫೈನಲ್‌ಗೆ ಬರೋದು ಪಕ್ಕಾ ಎನ್ನಲಾಗ್ತಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್ 11 (bigg boss kannada 11)ಪ್ರಾರಂಭವಾಗಿ ಈಗಾಗಲೇ 97 ದಿನಗಳಾಗಿವೆ. ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದಾರೆ. ಈ ವಾರ ಎಲಿಮಿನೇಷನ್ ಕೂಡ ನಡೆಯುವುದಿಲ್ಲ. ಹೀಗಿರುವಾಗ ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಸುಳಿವು ಸಹ ಕೊಟ್ಟಿದ್ದಾರೆ… ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ(bigg boss kannada 11) ಫಿನಾಲೆಗೆ ಇನ್ನು ಮೂರೇ ವಾರಗಳು ಬಾಕಿ ಉಳಿದಿವೆ ಎಂದು ಕಿಚ್ಚ ಸುದೀಪ್‌ ವೀಕೆಂಡ್‌ ಎಪಿಸೋಡ್‌ನಲ್ಲಿ ತಿಳಿಸಿದ್ದಾರೆ. ಇನ್ನೂ 4 ಜನ ಸ್ಪರ್ಧಿಗಳು (contestant)ಮನೆಯಿಂದ ಹೊರಬರಬೇಕಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ(bigg boss kannada 11) ಕೊನೆಯ ವಾರಗಳಲ್ಲಿ ಸ್ಪರ್ಧಿಗಳು ಹೇಗೆ ಆಡಬೇಕೆಂಬ ಸ್ಟಾಟರ್ಜಿ ಶುರುವಾಗಿದೆ.

ಇನ್ನೂ ಮೂರೇ ವಾರ ಉಳಿದಿರುವ ಕಾರಣ ಮುಂದಿನ ವಾರ ಮನೆಯ ಕ್ಯಾಪ್ಟನ್‌ ಆಗುವ ಸ್ಪರ್ಧಿ ನೇರವಾಗಿ ಫಿನಾಲೆಗೆ ಎಂಟ್ರಿ ಪಡೆಯಬಹುದು ಎನ್ನಲಾಗ್ತಿದೆ. ಕ್ಯಾಪ್ಟನ್‌ ಆದವರು ನಾಮಿನೇಷನ್‌ನಿಂದ ಬಚಾವ್‌ ಆಗಲು ಇಮ್ಯುನಿಟಿ ಪಡೆಯುತ್ತಾರೆ. ಈ ಇಮ್ಯುನಿಟಿಯೇ ಮುಂದಿನ ವಾರ ಮನೆಯ ಕ್ಯಾಪ್ಟನ್‌ ಆಗುವವರನ್ನು ಫಿನಾಲೆಗೆ ಕೊಂಡೊಯ್ಯಬಹುದು. ಇನ್ನೊಂದು ರೀತಿಯಲ್ಲಿ ಬಿಗ್‌ ಬಾಸ್‌ ಟಾಸ್ಕ್‌ ಒಂದನ್ನು ನೀಡಿ ಅದರಲ್ಲಿ ಗೆದ್ದವರನ್ನು ಫಿನಾಲೆ ಪ್ರವೇಶಿಸಿದ ಮೊದಲ ಕಂಟೆಸ್ಟಂಟ್‌ ಎಂದು ಸಹ ಘೋಷಿಸಬಹುದಾಗಿದೆ. ಹನಮಂತು, ಉಗ್ರಂ ಮಂಜು, ತ್ರಿವಿಕ್ರಮ್‌, ರಜತ್‌ ಈ ನಾಲ್ವರ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಿನ್ನೆ ಸುದೀಪ್‌ ಕೂಡ ವಿನ್ನರ್‌ ಯಾರಾಗಬಹುದೆಂದು ಸುಳಿವು ನೀಡಿದ್ದಾರೆ. ಇಷ್ಟು ದಿನಗಳವರೆಗಿನ ತಪ್ಪನ್ನು ಸರಿಪಡಿಸಿಕೊಂಡು, ಕೇವಲ ತನಗಾಗಿ ತನ್ನ ಆಟ ಆಡುವ ಸ್ಪರ್ಧಿಗೆ ಗೆಲವು ಹತ್ತಿರವಾಗಲಿದೆ. ಇದನ್ನೇ ಸುದೀಪ್‌ ಸಹ ತಮ್ಮದೇ ರೀತಿಯಲ್ಲಿ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಕೆಲವು ಬಿಗ್‌ ಬಾಸ್‌ ವೀಕ್ಷಕರ ಲೆಕ್ಕಾಚಾರದ ಪ್ರಕಾರ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಹನಮಂತು, ಉಗ್ರಂ ಮಂಜು, ತ್ರಿವಿಕ್ರಮ್‌, ರಜತ್‌ ಮತ್ತು ಚೈತ್ರಾ ಕುಂದಾಪುರ ಫಿನಾಲೆಗೆ ತಲುಪುತ್ತಾರೆ ಎನ್ನಲಾಗುತ್ತಿದೆ.

ಉಗ್ರಂ ಮಂಜು(Ugraṁ manju), ಹನಮಂತು(Hanamantu), ತ್ರಿವಿಕ್ರಮ್‌(Trivikram), ರಜತ್‌ (Rajat)ಮತ್ತು ಚೈತ್ರಾ ಕುಂದಾಪುರ (Chaitra Kundapura)ಇವರಲ್ಲಿ ರಜತ್‌, ಹನಮಂತು ಮತ್ತು ತ್ರಿವಿಕ್ರಮ್‌ ಟಾಪ್‌ ಕಂಟೆಸ್ಟಂಟ್‌ಗಳಾಗಬಹುದು. ಇವರಲ್ಲಿ ರಜತ್ ವಿನ್ನರ್‌ ಆಗಬಹುದು ಎನ್ನಲಾಗುತ್ತಿದೆ.‌
ಕಾರಣ ಈ ವಾರ ಕ್ಯಾಪ್ಟನ್‌ ಆದ ರಜತ್‌ಗೆ ಸುದೀಪ್‌ ಸರ್‌ ವಿಶ್‌ ಮಾಡಿಲ್ಲ ಅಂತ ಕೇಳ್ತಾರೆ… ಆಗ ಸುದೀಪ್‌ ನಿಮ್ಮ ಕಿವಿಯಲ್ಲಿ ಇರುವ ರಿಂಗ್‌ ಏನು ಹೇಳುತ್ತೆ ಅಂತ ಕೇಳ್ತಾರೆ… ಆಗ ರಜತ್‌ ಎದ್ದು ನಿಂತು ನಮಸ್ಕಾರ ಮಾಡ್ತಾರೆ. ಸೋ ಕಿಚ್ಚ ಕೊಟ್ಟಿರುವ ಸುಳಿವಿನ ಪ್ರಕಾರ ರಜತ್‌ ವಿನ್ನರ್‌ ಆಗ್ತಾರಾ… ಇಲ್ವಾ ಅನ್ನೋದನ್ನ ಕಾದು ನೋಡ ಬೇಕಿದೆ.

Exit mobile version