Site icon BosstvKannada

ಹುಷಾರ್! ಒಂದು ವಾರ ಇರಲಿದೆ ಭಾರೀ ಚಳಿ! ಎಲ್ಲೆಲ್ಲಿ ಹೆಚ್ಚು ಚಳಿ?

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಒಂದು ವಾರ ಭಾರೀ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಕೂಡ ಇಂದು ಬೆಳಗ್ಗೆಯಿಂದಲೇ ಹೆಚ್ಚು ಚಳಿ ಇದೆ. ನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ, ಹೀಗಾಗಿ ಬೆಂಗಳೂರಿಗೆ ಹವಾಮಾನ ಇಲಾಖೆ ಕೂಡ ಶೀತದ ಅಲೆಯ ಮುನ್ನೆಚ್ಚರಿಕೆ ನೀಡಿತ್ತು. ಮುಂದಿನ ಒಂದು ವಾರ ಬೆಂಗಳೂರು ಅಕ್ಷರಶಃ ನಡುಗಲಿದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಂಜು ಕವಿದಿತ್ತು. ಬೆಳಗ್ಗೆ ದಟ್ಟ ಮಂಜು, ಚಳಿ ಆವರಿಸಿತ್ತು. ನಗರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಹೆಚ್ಚಲಿದೆ. ಹಗಲು ಹೊತ್ತು ಹೆಚ್ಚಿನ ಉಷ್ಣ ಕಂಡು ಬರಲಿದ್ದು, ಎಲ್ಲೆಡೆ ಒಣಹವೆ ಕಂಡು ಬರಲಿದೆ. ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನುಳಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಕೂಡ ಶೀತಗಾಳಿ ಹೆಚ್ಚಾಗಿ ಬೀಸಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ತಜ್ಞರು ಸೂಚಿಸಿದ್ದಾರೆ.

Exit mobile version