BosstvKannada

Bengaluru Stampede Case: ಕಾಲ್ತುಳಿತ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. KSCA ಕಾರ್ಯದರ್ಶಿ ಸ್ಥಾನಕ್ಕೆ ಎ ಶಂಕರ್​, ಖಜಾಂಜಿ ಸ್ಥಾನಕ್ಕೆ ಜಯರಾಮ್ ರಾಜೀನಾಮೆ..!

ಚಿನ್ನಸ್ವಾಮಿ ಸಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣ ಹಂತ ಹಂತವಾಗಿ ತಿರುವು ಪಡೆದುಕೊಳ್ತಿದೆ. KSCA ಕಾರ್ಯದರ್ಶಿ ಎ ಶಂಕರ್​, ಖಜಾಂಜಿ ಜಯರಾಮ್ KSCA ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕಾರ್ಯದರ್ಶಿ ಎ. ಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ (Bengaluru Stampede Case) ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. KSCA ಕಾರ್ಯದರ್ಶಿ ಎ.ಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಎ ಶಂಕರ್ ಜೊತೆಗೆ ಖಜಾಂಚಿ ಜೈರಾಮ್ ಸಹ ರಾಜೀನಾಮೆ ನೀಡಿದ್ದು,ನಿನ್ನೆ KSCA ಅಧ್ಯಕ್ಷರಿಗೆ ಶಂಕರ್ ಹಾಗೂ ಜಯರಾಂ ರಾಜೀನಾಮೆ ಪತ್ರ ನೀಡಿದ್ದಾರೆ.

ನೈತಿಕ ಹೊಣೆ ಹೊತ್ತು ರಾಜೀನಾಮೆ

ತಮ್ಮ ‘ಪಾತ್ರ ಬಹಳ ಸೀಮಿತವಾಗಿದ್ದರೂ’ ದುರಂತಕ್ಕೆ ತಾವು ‘ನೈತಿಕ ಹೊಣೆಗಾರಿಕೆಯನ್ನು ಹೊಂದಿದ್ದೇವೆ’, ನೈತಿಕ ಜವಾಬ್ದಾರಿಯಿಂದ, ನಾವು ನಿನ್ನೆ ರಾತ್ರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ. ದಿನಾಂಕ 06.06.2025 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ” ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version