ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗ್ತಿದೆ. ಮುಂಗಾರಕ್ಕೂ ಮುನ್ನ ರಾಜ್ಯದಲ್ಲಿ ಭರ್ಜರಿ ಮಳೆಯಾಗ್ತಿದೆ. ರಾಜಧಾನಿ ಬೆಂಗಳೂರಲ್ಲಿನ(Bengaluru Rain) ಪರಿಸ್ಥಿತಿ ಅಂತೂ ಹೇಳ ತೀರದಾಗಿದೆ. ನಗರದಲ್ಲಿ ಅಷ್ಟೇ ಅಲ್ಲಾ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಜನ ಪರದಾಡ್ತಿದ್ದಾರೆ. ಮಳೆಯಿಂದ ನಗರದಲ್ಲಿ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿವೆ. ರಸ್ತೆಗಳು ನದಿಯಂತಾಗಿದ್ದು, ಬೃಹತ್ ಮರಗಳು ಧರಶಾಹಿಯಾಗಿವೆ. ಇನ್ನೂ ಅನೇಕ ಬಡಾವಣೆಗಳಿಗೆ ಜಲದಿಗ್ಬಂಧನವಾಗಿದ್ದು, ರಾಜ ಕಾಲುವೆಯ ನೀರು ಮನೆಗಳಿಗೆ ನುಗ್ಗಿವೆ. ಜನರ ಗೋಳು ಕೇಳೋರು ಯಾರು ಎಂಬಂತಾಗಿದೆ.
Also Read: HK Patil : ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಗ್ರೀನ್ ಸಿಗ್ನಲ್!
ಮಳೆ ಬಂದ್ರೆ ರಾಜಧಾನಿ ಪರಿಸ್ಥಿತಿ ಮಾತ್ರ ಹದಗೆಟ್ಟಿ ಹೋಗುತ್ತೆ.. ಹೀಗಿರುವಾಗ ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮುನ್ನ ಯಾವುದೇ ಮುಂಜಾಗ್ರತಾ ಕ್ರಮವನ್ನ ವಹಿಸದೆ ನಿರ್ಲಕ್ಷ್ಯ ತೋರೋ ಅಧಿಕಾರಿಗಳು, ಸಚಿವರು ಮಾತ್ರ ಇದ್ದು ಇಲ್ಲದಂತಾಗಿದೆ.

