Site icon BosstvKannada

ಮೆಟ್ರೋಪಾಲಿಟನ್ ಸಿಟಿಗಳಲ್ಲಿ Bengaluru ಸೇಫ್ ; ಸಚಿವ ಜಿ.ಪರಮೇಶ್ವರ್‌ರಿಂದ ಮಾಹಿತಿ

ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಒಳ ಮೀಸಲಾತಿ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. Bengaluru ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಹತ್ತಿರ ಸಮಯ ಸಾಲಲ್ಲ ಎಂದಿದ್ದರು.

ಕೆಲವರು ವಿಸ್ತರಣೆ ಮಾಡಿ ಅಂತ ಕೇಳಿದ್ದಾರೆ ಸಿಎಂ ಸಿದ್ದರಾಮಯ್ಯ, ನಾಗಮೋಹನ್ ದಾಸ್ ಅದರ ಬಗ್ಗೆ ತೀರ್ಮಾನಿಸ್ತಾರೆ. ಎಷ್ಟು ಪರ್ಸೆಂಟೇಜ್ ಆಗಿದೆ ನೋಡ್ತಾರೆ.. ಇದನ್ನ ನೋಡಿ ಇಬ್ಬರು ಒಳ ಮೀಸಲಾತಿ ಬಗ್ಗೆ ನಿರ್ಧಾರ ಮಾಡ್ತಾರೆ ಸಮಯ ವಿಸ್ತರಿಸಬೇಕೋ ಬೇಡ್ವೋ ನೋಡ್ತಾರೆ ಎಂದರು.. ಇನ್ನು ಇದೇ ವೇಳೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ ಈಗ 138 ಜನ ಅಕಾಂಕ್ಷಿಗಳಿದ್ದಾರೆ. ಅದರಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಗಮನ ಹರಿಸುತ್ತೆ ಎಂದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಅವರು ಬೆಂಗಳೂರು ಸೇಫ್ ಅಲ್ಲ ಎಂಬ ಬಿಜೆಪಿ ಆರೋಪಕ್ಕೆ ಪರಂ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಯಾವಾಗಲೂ ಹೇಳುತ್ತಲೇ ಇದೆ.

Also Read: Taliban ಸರ್ಕಾರದೊಂದಿಗೆ ಮೊದಲ ಬಾರಿಗೆ ಜೈಶಂಕರ್ ಮಾತುಕತೆ! : ಏನದು ಖಾಸ್‌ಬಾತ್‌..!

ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾರೆ. ಸರ್ವೆಯಲ್ಲಿ ಬೆಂಗಳೂರು ಸೇಫ್ ಅಂತ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಅಧ್ಯಯನದ ಪ್ರಕಾರ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬೆಂಗಳೂರು ಸೇಫ್, ಹೀಗಂತ ಸರ್ವೆಯಲ್ಲೇ ವರದಿ ಬಂದಿದೆ ಎಂದು ಕೌಂಟರ್‌ ನೀಡಿದ್ದಾರೆ. ಮಹಿಳಾ ಸುರಕ್ಷಿತೆಗೆ ನಿರ್ಭಯ ಪ್ರೋಗ್ರಾಂ ಇದೆ. ಕೇಂದ್ರ ಸರ್ಕಾರವೇ ಮಾಡಿದ ಕಾರ್ಯಕ್ರಮ ಎಲ್ಲ ರೀತಿಯ ಹಣಕಾಸು ನೆರವು ನೀಡಿದ್ರು. ಆ ಹಣವನ್ನು ಕೆಲ ರಾಜ್ಯಗಳ ಖರ್ಚು ಮಾಡಿಲ್ಲ, ನಾವು ಆ ಹಣವನ್ನೆಲ್ಲ ಖರ್ಚು ಮಾಡಿದ್ದೇವೆ. ಎಲ್ಲೆಲ್ಲಿ ಸುರಕ್ಷತೆ ಮಾಡಬೇಕು ಮಾಡಿದ್ದೇವೆ. ಹೀಗಾಗಿ ನಮ್ಮ ಬೆಂಗಳೂರು ಸೇಫ್ ಅಂತ ಹೇಳಿದ್ದಾರೆ.

Exit mobile version